Breaking
6 May 2026, Wed

ಅಡಿಕೆ ಮರಗಳಿಗೆ ಎಲೆಚುಕ್ಕೆ ರೋಗ ಭಾದೆ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಲು ಮನವಿ : ಪ್ರಭಾಕರ ಪ್ರಭು

ಬಂಟ್ವಾಳ: ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳ ರೈತರ ಪ್ರಮುಖ ಬೆಳೆಯಾದ ಅಡಿಕೆ ಮರಗಳಿಗೆ ಎಲೆ ಚುಕ್ಕೆ ರೋಗವು ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಅಡಿಕೆ ಬೆಳೆಗಾರರ ಸಾವಿರಾರು ಅಡಿಕೆ ಮರಗಳು ಸಾಯುತ್ತಿದ್ದು, ಅಡಿಕೆ ಇಳುವರಿ ಸಹ ಗಣನೀಯವಾಗಿ ಇಳಿಮುಖವಾಗಿದೆ. ಈ ವರ್ಷದಲ್ಲಿ ನಿರಂತರವಾಗಿ ಸುರಿದ ಮಳೆಯ ಪ್ರಭಾವದಿಂದ ಕೊಳೆರೋಗದಿಂದಾಗಿ ಕಂಗ್ಗೆಟ್ಟಿರುವ ಅಡಿಕೆ ಬೆಳೆಗಾರರಿಗೆ ಎಲೆ ಚುಕ್ಕೆ ರೋಗದಿಂದಾಗಿ ಅಡಿಕೆ ಮರಗಳೇ ಸಾಯುತ್ತಿರುವ ಪರಿಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಪರ್ಯಾಯ ಮಾರ್ಗವಿಲ್ಲದೆ ಚಿಂತೆಯಲ್ಲಿ ತೊಡಗಿದ್ದಾರೆ.

ಕರಾವಳಿ ಜಿಲ್ಲೆಗಳ ಬಹುತೇಕ ಆರ್ಥಿಕ ವ್ಯವಹಾರವು ಅಡಿಕೆ ಬೆಳೆಗಾರರಿಂದಲೇ ಅವಲಂಬಿತವಾಗಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ರೈತರು ಬ್ಯಾಂಕ್ ಗಳಲ್ಲಿ ಸಾಲ ಮಾಡಿದ ಹಣವನ್ನು ಕೃಷಿ ಗೋಸ್ಕರ ವಿನಿಯೋಸಿದ್ದು ಈ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಲ ಮರು ಪಾವತಿ ಮಾಡಲು ರೈತರಿಗೆ ಕಷ್ಟಕರವಾಗಿದೆ.

ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಅಡಿಕೆ ತೋಟ ಸಮೀಕ್ಷೆ ನಡೆಸಿ ತೋಟಗಾರಿಕೆ ಬೆಳೆ ಸಂಬಂಧವಾಗಿ ಪಡೆದಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಪ್ರತಿ ಅಡಿಕೆ ಮರಕ್ಕೆ ಕನಿಷ್ಠ 5 ಸಾವಿರದಂತೆ ಪ್ರಕೃತಿಕಾ ಪರಿಹಾರ ನೀಡುವಂತೆ ಕರ್ನಾಟಕ ಸರಕಾರದ ಮಾನ್ಯ ತೋಟಗಾರಿಕೆ ಸಚಿವರಿಗೆ ದ. ಕನ್ನಡ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷರು ಪ್ರಭಾಕರು ಪ್ರಭು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *