ಸುರತ್ಕಲ್: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಹನಿ ಫ್ಯಾಷನ್ ಶಾಪ್, ಜನರಲ್ ಸ್ಟೋರ್ ಅಂಗಡಿ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

6ನೇ ತರಗತಿಯ ಬಾಲಕ ಚಾಕಲೇಟ್ ಖರೀದಿಸಲು ಸುರತ್ಕಲ್ ಬಳಿಯ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿ ಇರುವ ಹನಿ ಫ್ಯಾಷನ್ ಶಾಪ್ ಜನರಲ್ ಸ್ಟೋರ್ ಅಂಗಡಿಗೆ ತೆರಳಿದಾಗ ರೂಂ ಒಂದರಲ್ಲಿ ಕೂಡಿ ಹಾಕಿ ಬಾಲಕನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.




