Breaking
30 Sep 2026, Wed

ಪೆರ್ಲ-ಬೈಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಶೌಚಾಲಯ ಕಟ್ಟಡಕ್ಕೆ ಶಿಲಾನ್ಯಾಸ

ಬಂದಾರು: ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂ.ಆರ್.ಪಿ.ಎಲ್. (MRPL) ಸಂಸ್ಥೆಯ ಸಿ.ಎಸ್.ಆರ್. (CSR) ಅನುದಾನದಡಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶೌಚಾಲಯ ಕಟ್ಟಡದ ಶಿಲಾನ್ಯಾಸವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜಾ ನೆರವೇರಿಸಿದರು.‌

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಹಾಬಲ ಗೌಡ, ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೇಂಖ್ಯಾರ್, ಬಂದಾರು ಶಕ್ತಿ ಕೇಂದ್ರದ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಗಂಗಾಧರ ಪೂಜಾರಿ ದಂಬೆತ್ತಿಮಾರು, ಬೂತ್ ಅಧ್ಯಕ್ಷ ಡೀಕಯ್ಯ ಗೌಡ ಕಂಚರೊಟ್ಟು, ಕಾರ್ಯದರ್ಶಿ ಲೋಹಿತ್ ಗೌಡ ಸೋಣಕುಮೇರು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ಮಂಡಲ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ., ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಅಧ್ಯಕ್ಷ ಲೋಕ್ಷತ್ ಗೌಡ ಅನಿಲ, ಬಂದಾರು-ಬೈಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಉಮೇಶ್ ಗೌಡ ಅಂಗಡಿಮಜಲು, ಪದ್ಮುಂಜಾ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ನಿರ್ದೇಶಕರಾದ ಉದಯ ಕುಮಾರ್ ಬಿ.ಕೆ. ಹಾಗೂ ಪ್ರಭಾಕರ ಗೌಡ ಗುತ್ಯೋಡಿ, ಬಂದಾರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ. ಗೌಡ ಪುಯಿಲ, ಅನಿತಾ ಉದಯ ಕುರುಡಂಗೆ, ಭಾರತಿ ಕೊಡಿಯೇಲು, ಚೇತನ್ ಪಾಲ್ತಿಮಾರ್, ಪ್ರಮುಖರಾದ ಹೊನ್ನಪ್ಪ ಗೌಡ ಸೋಣಕುಮೇರು, ಲಿಂಗಪ್ಪ ಗೌಡ ಅನಿಲ, ದಿನೇಶ್ ಗೌಡ ಅಡ್ಡಾರು, ನವೀನ್ ಪ್ರಕಾಶ್ ಕರ್ಲೊಡಿ, ಜ್ಯೋತಿ ಕುರುಡಂಗೆ, ಲಕ್ಷ್ಮೀಕಾಂತ್ ಕೀಲಾರು, ರಾಮಣ್ಣ ಮಡಿವಾಳ, ದಿನೇಶ್ ಗೌಡ ಸೋಣಕುಮೇರು, ಶ್ಯಾಮಲಾ ಪಯ್ಯೋಡಿ, ವಸಂತ ಗೌಡ ಬೈದ್ರೋಟ್ಟು, ಮೋಹನ್ ಗೌಡ ನಾಗದೋಡಿ, ಶಶಿಧರ ಬಾಲಂಪಾಡಿ, ನಿತಿನ್ ಕೊಡಿಯೇಲ್, ದಿವಾಕರ ಗೌಡ ಬಾಲಂಪಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *