Breaking
17 Nov 2026, Tue

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಸಿ. ಭಂಡಾರಿಗೆ ಹುಟ್ಟೂರ ಗೌರವ

ಮಂಗಳೂರು: 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಂಬಡೆಬೈಲು ಚಂದ್ರಶೇಖರ ಭಂಡಾರಿ (ಎ.ಸಿ. ಭಂಡಾರಿ) ಅವರಿಗೆ ಹುಟ್ಟೂರಿನಲ್ಲಿ ಗೌರವಪೂರ್ವಕ ಸನ್ಮಾನ ಸಲ್ಲಿಸಲಾಯಿತು.

ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಅಭಿವೃದ್ಧಿ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ದೈವ-ದೇವರುಗಳ ಅನುಗ್ರಹ ಪ್ರಸಾದ ನೀಡಿ, ಮುದೆಲ್ ಮುಟ್ಟಿ ದೈವಸ್ಥಾನದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಸಜಿಪ ಮುನ್ನೂರು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ್ ಬಾಸಿತ್ರಾಯ, ಡಾ. ಜಯಪ್ರಕಾಶ್ ತಪೋವನ ಅಲಾಡಿ, ನಾಲ್ಕೈಯಿತ್ತಾಯ ದೈವಸ್ಥಾನದ ಗಡಿಪ್ರಧಾನ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವಾರಪಾಲು, ಪರಾರಿ ಗುತ್ತುವಿನ ಹಿರಿಯರಾದ ರಮಾನಾಥ್ ಶೆಟ್ಟಿ, ದಯಾನಂದ ಶೆಟ್ಟಿ, ಧೀರಜ್ ಶೆಟ್ಟಿ, ಗಂಗಾಧರ ಗಟ್ಟಿ, ಚಂದ್ರಶೇಖರ ಗಟ್ಟಿ, ಸತೀಶ್ ಗಟ್ಟಿ, ಚರಣ್ ಜುಮಾದಿ ಗುಡ್ಡೆ, ಮನೋಜ್ ಕುಮಾರ್, ಸೀತಾರಾಮ ಶೆಟ್ಟಿ, ಕಾಂತಾಡಿ ಗುತ್ತು, ಹರಿಪ್ರಸಾದ್ ಆಳ್ವಾರಪಾಲು ಹಾಗೂ ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.

ದೈವಸ್ಥಾನದ ಗುತ್ತು ಮನೆತನದವರು, ಚಾಕಿರಿ ವರ್ಗದವರು ಹಾಗೂ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಶ್ರೀ ಲಕ್ಷ್ಮೀಶ್ ಆಳ್ವ ಗುವೆಲ್ಮಾರ್ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಮಲರಾಯ ದೈವಸ್ಥಾನದ ಗಡಿಪ್ರಧಾನ ಸುಕುಮಾರ್ ಬಂಟ್ವಾಳ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿವಣ್ಣ ಖಂಡಿಗ ಅವರು ವಂದಿಸಿದರು.

Leave a Reply

Your email address will not be published. Required fields are marked *