ಪದ್ಮುಂಜ: ಬಂದಾರು–ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಪೇಟೆಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ಫೈಬರ್ ಹಂಪ್ಸ್‌ಗಳು ಹದಗೆಟ್ಟು ಹೋಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ.

ಫೈಬರ್ ಹಂಪ್ಸ್‌ಗಳನ್ನು ಅಳವಡಿಸಲು ಬಳಸಲಾಗಿದ್ದ ಆಂಕರ್ ಬೋಲ್ಟ್‌ಗಳು ರಸ್ತೆಯಲ್ಲೇ ಉಳಿದಿದ್ದು, ಅವುಗಳಿಂದ ವಾಹನಗಳ ಟಯರ್ ಪಂಚರ್ ಆಗಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಇದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯಲ್ಲಿ ಬೋಲ್ಟ್‌ಗಳು ಅಪಾಯಕಾರಿಯಾಗಿ ಉಳಿದಿರುವುದರಿಂದ ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಹದಗೆಟ್ಟ ಹಂಪ್ಸ್‌ಗಳನ್ನು ದುರಸ್ತಿಪಡಿಸುವುದರ ಜೊತೆಗೆ ರಸ್ತೆಯಲ್ಲಿರುವ ಬೋಲ್ಟ್‌ಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.




