Breaking
13 Nov 2026, Fri

ಬಂದಾರು: ಸಿದ್ಧಿವಿನಾಯಕ ಯುವಕ ಮಂಡಲದಿಂದ ರಸ್ತೆ ಬದಿ ಸ್ವಚ್ಛತಾ ಶ್ರಮದಾನ

ಬಂದಾರು: ಗ್ರಾಮದ ಪೆರ್ಲ–ಬೈಪಾಡಿ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲದ ವತಿಯಿಂದ ಸೋಣಕುಮೇರು ಸೇತುವೆ ಬಳಿಯಿಂದ ಬೈಪಾಡಿವರೆಗಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟಿ ಹಾಗೂ ಹುಲ್ಲು ತೆರವುಗೊಳಿಸುವ ಸ್ವಚ್ಛತಾ ಕಾರ್ಯ ನ.11ರಂದು ನಡೆಯಿತು.

ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಬೆಳೆದಿದ್ದ ಹುಲ್ಲಿನಿಂದಾಗಿ ಶಾಲಾ ವಿದ್ಯಾರ್ಥಿಗಳು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಹುಲ್ಲು ಕತ್ತರಿಸಿ ರಸ್ತೆ ಬದಿಯನ್ನು ಸ್ವಚ್ಛಗೊಳಿಸಿದರು.

ಈ ಶ್ರಮದಾನದಲ್ಲಿ ಶಶಿಧರ ಬಾಲಂಪಾಡಿ, ಸಂಪತ್ ಕರ್ಲೊಡಿ, ಲೋಹಿತ್ ಸೋಣಕುಮೇರು, ಪ್ರವೀಣ್ ಬಾಲಂಪಾಡಿ, ನವೀನ್ ಪ್ರಕಾಶ್ ಕರ್ಲೊಡಿ, ಕುಶಾಲಪ್ಪ ಸೋಣಕುಮೇರು, ರಾಧಾಕೃಷ್ಣ ಪಾರೋಟ್ಟು, ಸತೀಶ್ ಬಾಲಂಪಾಡಿ, ಚಿದಾನಂದ ಬಾಲಂಪಾಡಿ, ಚೀತ್ರೇಶ್ ಬಾಲಂಪಾಡಿ, ಕೀರ್ತನ್ ಬಾಲಂಪಾಡಿ ಹಾಗೂ ರಾಕೇಶ್ ಸೋಣಕುಮೇರು ಭಾಗವಹಿಸಿದರು.

ಊರಿನ ಪ್ರಮುಖರು ಹುಲ್ಲು ಕತ್ತರಿಸುವ ಯಂತ್ರಕ್ಕೆ ಪೆಟ್ರೋಲ್ ಒದಗಿಸುವುದರ ಜೊತೆಗೆ ಶ್ರಮದಾನಿಗಳಿಗೆ ಜ್ಯೂಸ್ ಹಾಗೂ ಸಿಹಿತಿಂಡಿ ನೀಡಿ ಸಹಕರಿಸಿದರು. ಯುವಕ ಮಂಡಲದ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *