Breaking
12 Nov 2026, Thu

ಬೆಂಜನಪದವು: ಚಿನ್ನದ ಪದಕ ವಿಜೇತ ವಿದ್ಯಾರ್ಥಿನಿ ದಿಶಾಗೆ ಸನ್ಮಾನ

ಬಂಟ್ವಾಳ: ಗ್ರಾಮೀಣ ಪ್ರದೇಶವಾದ ಬೆಂಜನಪದವಿನಲ್ಲಿ ಹುಟ್ಟಿ ಬೆಳೆದು, ದೇರಳಕಟ್ಟೆಯ ಕೆ.ಎಸ್. ಮೆಡಿಕಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಚಿನ್ನದ ಪದಕ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿನಿ ದಿಶಾ ಬೆಂಜನಪದವು ಅವರನ್ನು ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.


ಬೆಂಜನಪದವಿನ ನಿವಾಸಿಗಳಾದ ಕೇಶವ ಮೇಸ್ತ್ರಿ ಮತ್ತು ವಿಮಲ ದಂಪತಿಯ ಪುತ್ರಿಯಾಗಿರುವ ದಿಶಾ ಅವರನ್ನು ಬಂಟ್ವಾಳ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ನವೀನ್ ಕೋಟ್ಯಾನ್, ಮೂಡುಪೆರಾರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಂಜಿಮಠ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಮನೋಜ್ ಕನಪಾಡಿ, ನೋಟರಿ ವಕೀಲ ವಿನೋದರ ಪೂಜಾರಿ, ಪ್ರಮುಖರಾದ ನಾರಾಯಣ ಪಲ್ಲಿಕಂಡ, ಅಶೋಕ್, ಜಗದೀಶ್ ಬಂಗೇರ ಕುಂಜತ್ತೂರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *