Breaking
13 Nov 2026, Fri

ಪೆರಾಜೆಯಲ್ಲಿ ಸಾರ್ವಜನಿಕ ದೀಪಾವಳಿ ಸಂಭ್ರಮ: ಲಯನ್ಸ್ ಕ್ಲಬ್ ಮಾಣಿಯಿಂದ ವಸ್ತ್ರದಾನ

ಬಂಟ್ವಾಳ: ಪೆರಾಜೆ ಅಂಗನವಾಡಿ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಮಾಣಿ ವತಿಯಿಂದ ಸಾರ್ವಜನಿಕ ದೀಪಾವಳಿ ಉತ್ಸವ ಹಾಗೂ ವಸ್ತ್ರದಾನ ಕಾರ್ಯಕ್ರಮ ನಡೆಯಿತು.
ಲಯನ್ಸ್ ಕ್ಲಬ್ ಮಾಣಿಯ ಅಧ್ಯಕ್ಷ ಜನಾರ್ದನ ಪೆರಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ವಸ್ತ್ರದಾನ ಮಾಡಲಾಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಸತ್ಸಂಗ ಸಮಿತಿ ಕಾರ್ಯಕಾರಿಣಿ ಸದಸ್ಯ ಹಾಗೂ ನಿವೃತ್ತ ಶಿಕ್ಷಕ ಸೀತಾರಾಮ ಭಟ್ ಅವರು ದೀಪಾವಳಿ ಹಬ್ಬದ ವೈಶಿಷ್ಟ್ಯ ಮತ್ತು ಮಹತ್ವವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಅನಿಲ್ ಕುಮಾರ್, ಸದಸ್ಯ ಉಮೇಶ್ ಸಮೃದ್ಧಿ, ಶ್ರೀ ಸೀತಾರಾಮ ಸಹಕಾರ ಬಳಗದ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ, ಅಧ್ಯಕ್ಷ ನಾರಾಯಣ ಎಂ.ಪಿ., ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ತಿಮ್ಮಪ್ಪ ಮಾಣಿ, ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜೆ.ಪಿ., ಕಾರ್ಯದರ್ಶಿ ಅಮಿತಾ ಅನಿಲ್ ಹಾಗೂ ಉಮೇಶ್ ಎಸ್.ಪಿ. ಉಪಸ್ಥಿತರಿದ್ದರು.


ಆರಂಭದಲ್ಲಿ ಬೆಳಕಿನ ಮರದಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಅಶೋಕ ಬರಿಮಾರು ಅವರು ಪೊಳಲಿ ಶೀನಪ್ಪ ಹೆಗ್ಗಡೆ ವಿರಚಿತ ತುಳುವಾಲ ಬಲಿಯೇಂದ್ರ ಕಥೆಯನ್ನು ವಾಚಿಸಿದರು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಪಟಾಕಿ ಸಿಡಿಸಿ, ಉದ್ದಿನ ದೋಸೆ ಹಾಗೂ ಸಿಹಿ ಅವಲಕ್ಕಿ ಸವಿಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

Leave a Reply

Your email address will not be published. Required fields are marked *