ಕುಕ್ಕೇಡಿ: ಕಟ್ಟಡ ಕಾಮಗಾರಿ ವೇಳೆ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಸಂಸ (ಅಂಬೇಡ್ಕರ್‌ವಾದ)ದ ಸಕ್ರಿಯ ಕಾರ್ಯಕರ್ತ ಹಾಗೂ ನಿಟ್ಟಡೆ ಗ್ರಾಮದ ದರ್ಖಾಸು ನಿವಾಸಿ ವಸಂತರವರ ವೈದ್ಯಕೀಯ ಚಿಕಿತ್ಸೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ವತಿಯಿಂದ ಧನಸಹಾಯ ನೀಡಲಾಯಿತು.

ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಸಂಕಷ್ಟದ ಸಂದರ್ಭದಲ್ಲಿ ಸಂಘಟನೆ ನೆರವಾಗಲಿದೆ ಎಂಬ ಆಶಯದೊಂದಿಗೆ ಗ್ರಾಮ ಶಾಖೆಯ ವತಿಯಿಂದ ಹಣ ಸಂಗ್ರಹಿಸಿ, ವಸಂತರವರ ಕುಟುಂಬಕ್ಕೆ ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಗ್ರಾಮ ಸಮಿತಿ ಸಂಚಾಲಕ ಹರೀಶ್ ಪಂಡಿಂಜೆ, ತಾಲೂಕು ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ, ವೇಣೂರು ಹೋಬಳಿ ಸಂಚಾಲಕ ಚರಣ್ ರಾಜ್ ನಿಟ್ಟಡೆ, ಗ್ರಾಮ ಸಮಿತಿ ಪದಾಧಿಕಾರಿಗಳಾದ ಸಂತೋಷ ಕುಕ್ಕೇಡಿ, ಸದಾನಂದ ನಿಟ್ಟಡೆ, ಮನೀಷ್ ನಿಟ್ಟಡೆ, ಯೋಗೀಶ್ ನಿಟ್ಟಡೆ, ಸುಜಯ್ ನಿಟ್ಟಡೆ, ವಿಶ್ವನಾಥ ಕುಕ್ಕೇಡಿ, ಸಹನ್ ಕುಕ್ಕೇಡಿ, ದಿನೇಶ್ ಕುಕ್ಕೇಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



