Breaking
26 Sep 2026, Sat

ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಕಾರು : ಚಾಲಕನಿಗೆ ಗಂಭೀರ ಗಾಯ

ಕಾಪು: ಕಾಪುವಿನ ವಿದ್ಯಾನಿಕೇತನ್ ಶಾಲೆ ಎದುರಿನ ಬಸ್ ನಿಲ್ದಾಣಕ್ಕೆ ಕಾರೊಂದು ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಡಿ. 7ರಂದು ಬೆಳಿಗ್ಗೆ ನಡೆದಿದೆ.

ಗಂಭೀರ ಗಾಯಗೊಂಡ ಚಾಲಕನನ್ನು ಕೊಪ್ಪಲಂಗಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಕಾಪುವಿನಿಂದ ಉಚ್ಚಿಲ ಕಡೆಗೆ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ಗಾಯಗೊಂಡ ಇಸ್ಮಾಯಿಲ್ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *