Breaking
30 Sep 2026, Wed

ಬಿಜೆಪಿ ಶಿಕ್ಷಣ ಪ್ರಕೋಷ್ಠದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪದಗ್ರಹಣ

ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಆರಂಭಿಕ ಸಭೆ ಹಾಗೂ ಪ್ರಥಮ ಸಭೆ ಸೆ.26ರಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಜಿಲ್ಲಾ ಹಾಗೂ ಮಂಡಲ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿ ಪದಗ್ರಹಣ ನೆರವೇರಿಸಲಾಯಿತು.

ಜಿಲ್ಲಾ ಸಂಚಾಲಕರು ವಸಂತ ಮಂಜನಾಡಿ, ಸಹ ಸಂಚಾಲಕರು ನಾರಾಯಣ ಗೌಡ ಬಂಟ್ವಾಳ, ಸುರೇಶ್ ಭಂಡಾರಿ ಮೂಡುಬಿದಿರೆ, ವಿನೀತ್ ನಾಯರ್ ಮಂಗಳೂರು ಉತ್ತರ, ಸತ್ಯನಾರಾಯಣ ಭಟ್ – ಮಂಗಳೂರು ದಕ್ಷಿಣ, ಸುರೇಶ್ ಎಂ.ಎಸ್. ಬೆಳ್ತಂಗಡಿ, ಮನಮೋಹನ್ ಸುಳ್ಯ, ರಾಜೇಂದ್ರ ಮಾಸ್ಟರ್ ಪುತ್ತೂರು, ಮಂಗಳೂರು ದಕ್ಷಿಣ ಸಂಚಾಲಕರು ಕೆ. ಬಾಬು, ಮಂಗಳೂರು ಮಂಡಲ ಸಂಚಾಲಕರು ವಸಂತ್ ರೈ ಬಿ.ಕೆ. ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರು ಹಾಗೂ ಬಿಜೆಪಿ ಸೇವಾ ಸಂಕಲ್ಪದ ‘ಬದಲಾವಣೆಯ ಕಥೆ’ ರಾಜ್ಯ ಸಹ ಉಸ್ತುವಾರಿ ಎಂ.ಜಿ. ಭಟ್ ಕುಮಟಾ ಭಾಗವಹಿಸಿ, ‘ಬದಲಾವಣೆಯ ಕಥೆ’ ಕಾರ್ಯಕ್ರಮದ ಚಟುವಟಿಕೆಗಳಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ಭಾಗವಹಿಸುವಂತೆ ಸೂಚಿಸಿದರು. ಅಲ್ಲದೆ ಜಿಲ್ಲಾ ಹಾಗೂ ಮಂಡಲ ಮಟ್ಟದ ಸಮಿತಿಗಳ ಕಾರ್ಯಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸದಸ್ಯ ಮತ್ತು ದಕ್ಷಿಣ ಕನ್ನಡ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಉಪಸ್ಥಿತರಿದ್ದು, ಸಲಹೆ – ಸೂಚನೆಗಳನ್ನು ನೀಡಿದರು. ಪ್ರಕೋಷ್ಠದ ಜಿಲ್ಲಾ ಸಂಚಾಲಕ ವಸಂತಕುಮಾರ್ ಮಂಜನಾಡಿ ವಂದಿಸಿದರು.

Leave a Reply

Your email address will not be published. Required fields are marked *