ಬಂಟ್ವಾಳ: ಮಾನವೀಯ ಮೌಲ್ಯಗಳ ಜೊತೆ ಸೇವೆಯಲ್ಲೇ ಸಂತೃಪ್ತಿ ಕಾಣುವ ಸೇವಾಮನೋಭಾವವನ್ನು ಕಿರಿಯ ವಯಸ್ಸಿನಲ್ಲೇ ರೂಢಿಸಿಕೊಂಡ ಅರ್ಜುನ್ ಭಂಡಾರ್ಕರ್ ಅವರ ಬದುಕು ಎಲ್ಲರಿಗೂ ಪ್ರೇರಣಾದಾಯಕ. ಮಾನವೀಯತೆ ಈ ಜಗತ್ತಿನ ಸರ್ವ ಶ್ರೇಷ್ಠ ಸಂಪತ್ತು ಎಂದು ವಾಲ್ಟರ್ ನಂದಳಿಕೆ ಹೇಳಿದರು.

ಅವರು ಡಿ.07ರಂದು ಬಂಟ್ವಾಳ ಸ್ವರ್ಣಸೌಧ ಸಭಾಂಗಣದಲ್ಲಿ ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ಅರ್ಜುನ್ ಭಂಡಾರ್ಕರ್ ಇವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳಾನ್ನಾಡುತ್ತಾ ಅರ್ಜುನ್ ಭಂಡಾರ್ಕರ್ ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಶುಭ ಸಂಸ್ಥೆಯ ಮಾಲಕರಾದ ಭುವನೇಶ್ ಪಚಿನಡ್ಕ ದೀಪ ಬೆಳಗಿ ಉದ್ಗಾಟಿಸಿದರು.
ವಿ.ಎನ್.ಆರ್ ಗೋಲ್ಡ್ ಮಾಲಕರಾದ ನಾಗೇಂದ್ರ ಎ. ಬಾಳಿಗ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಚನ್ ಸಿಲ್ಕ್ಸ್ ಮಾಲಕರು ಪ್ರಕಾಶ್ ಅಂಚನ್, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಜಿ.ಎಸ್.ಬಿ ಸೇವಾ ಸಂಘ ಬಂಟ್ವಾಳ ಅಧ್ಯಕ್ಷರು ಎನ್ ಲಕ್ಷ್ಮೀನಾರಾಯಣ ಮಲ್ಯ, ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು, ಮಾಜಿ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಭಾಗ್ಯಶ್ರೀ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 4 ಅಶಕ್ತ ಕುಟುಂಬಗಳಿಗೆ ಆರೋಗ್ಯ ನಿಧಿ ವಿತರಿಸಲಾಯಿತು ಹಾಗೂ ಸರಕಾರಿ ವಸತಿ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ಸನ್ಮಾನಿತರನ್ನು ಅಭಿನಂದಿಸಿದರು.
ಗಿರೀಶ್ ಪೈ ಸ್ವಾಗತಿಸಿ, ಸಚಿನ್ ಸುವರ್ಣ ಪ್ರಾಸ್ತಾವನೆಗೈದರು. ಕುಸುಮಾಕರ್ ಕುಂಪಲ ಅಭಿನಂದನಾ ಪತ್ರವನ್ನು ವಾಚಿಸಿ, ಅಜಿತ್ ಕುಮಾರ್ ಧನ್ಯವಾದವಿತ್ತರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.





