Breaking
26 Jun 2026, Fri

ಸಮಾಜಮುಖಿ ಕೆಲಸದೊಂದಿಗೆ ರೋಟರಿ ಕ್ಲಬ್ ಬಂಟ್ವಾಳ ಲೋರೆಟೊ ಹಿಲ್ಸ್ ರೋಟರಿ ಜಿಲ್ಲೆಗೆ ಮಾದರಿ – ರೋ. ವಿಜಯ ಪೆರ್ನಾಂಡಿಸ್

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಲೋರೆಟೊ ಹಿಲ್ಸ್ ಈ ವರ್ಷ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಹಮ್ಮಿಕೊಂಡು ರೋಟರಿ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಎಂಬುದಾಗಿ ಹೆಸರು ಗಳಿಸಿದೆ ಎಂದು ರೋಟರಿ ಕ್ಲಬ್ ಬಂಟ್ವಾಳ ಲೋರಟೊ ಹಿಲ್ಸ್ ಅಧ್ಯಕ್ಷರಾದ ರೋ. ವಿಜಯ ಪೆರ್ನಾಂಡಿಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಅಂಗನವಾಡಿಗೆ ಕ್ಲಬ್ ವತಿಯಿಂದ ಪೋಡಿಯಂ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೋಟರಿ ಕ್ಲಬ್ ಗಳು ಪೇಟೆಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದಲ್ಲಿರುವ ಅಂಗನವಾಡಿಗಳು, ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಿಗೆ ಕೊಡುಗೆ ನೀಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರೊಂದಿಗೆ ರೋಟರಿ ಕ್ಲಬ್ ಗಳು ಸಮಾಜದಲ್ಲಿ ಗುರುತಿಸಿಕೊಂಡಿವೆ ಎಂದರು.

ಈ ಸಂದರ್ಭದಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬೇಬಿ ಪೂಜಾರಿ, ರೋಟರಿ ಕ್ಲಬ್ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್, ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ರೋ.ಸುರೇಶ ಶೆಟ್ಟಿ, ರೋ.ರಾಮಚಂದ್ರ ಶೆಟ್ಟಿಗಾರ್, ಕೋಶಾಧಿಕಾರಿ ರೋ. ಅರುಣ್ ಮಾಡ್ತಾ, ಕ್ಲಬ್ ಸದಸ್ಯರಾದ ರೋ.ರಾಜೇಶ್ ಶೆಟ್ಟಿ ಕೊನೆರಬೆಟ್ಟು, ರೋ. ರೋನಾಲ್ಡ್ ಮೋರಸ್, ಪ್ರಮುಖರಾದ ರೋಷನ್, ರಮೇಶ್ ಆಚಾರ್ಯ, ಅಂಗನವಾಡಿ ಸಹಾಯಕಿ ರೇವತಿ ಸೇರಿದಂತೆ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಸರಿತಾ ಶೆಟ್ಟಿ ಸ್ವಾಗತಿಸಿ, ಧನ್ಯವಾದವಿತ್ತರು.

Leave a Reply

Your email address will not be published. Required fields are marked *