ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ‘ಸೇವಾ ಸಂಕಲ್ಪ’ ಯೋಜನೆಯಡಿ ಪಂಜಿಕಲ್ಲು ಗ್ರಾಮದ ಕೊಂಬರಬೈಲು ಬಸ್ ತಂಗುದಾಣದ ಬಳಿ ಸ್ವಚ್ಛತಾ ಆಂದೋಲನ ಹಾಗೂ ಗಿಡ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು.

ಪಂಜಿಕಲ್ಲು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಹಿಂದುಳಿದ ಮೋರ್ಚಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಬದಿಯ ಹುಲ್ಲು ಕಟಾವು ನಡೆಸಿ, ಗಿಡಗಳನ್ನು ನೆಡಲಾಯಿತು. ಬಸ್ ತಂಗುದಾಣವನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳದ ಸ್ವಚ್ಛತೆಗೆ ಆದ್ಯತೆ ನೀಡಲಾಯಿತು.

ಇದೇ ವೇಳೆ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರಬೈಲು ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕಾರ್ಯಕರ್ತರು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಕೋಶಾಧಿಕಾರಿ ಹಾಗೂ ಪಂಜಿಕಲ್ಲು ಶಕ್ತಿ ಕೇಂದ್ರದ ಪ್ರಭಾರಿ ಬಿ. ದಿನೇಶ್ ಭಂಡಾರಿ, ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮಿನಾರಾಯಣ ಗೌಡ, ಹಿಂದುಳಿದ ಮೋರ್ಚಾ ಸದಸ್ಯರಾದ ಕೇಶವ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ, ಕಾರ್ಯದರ್ಶಿ ಹರೀಶ್ ಶೆಟ್ಟಿ, ಯತಿನ್, ಮೋಹನದಾಸ್, ಪ್ರಮುಖರಾದ ನಾರಾಯಣ ಭಂಡಾರಿ, ಜಯ ಕುಂದರ್ ಬಾಲೇಶ್ವರ, ಮೋನಪ್ಪ ಪೂಜಾರಿ, ಅರುಣ್ ಗೌಡ, ತೇಜಸ್, ನಾರಾಯಣ ಸಪಲ್ಯ, ಧನುಷ್, ಪ್ರವೀಣ್ ಪಟ್ರಾಡಿ, ರವೀಂದ್ರ ಪಟ್ರಾಡಿ, ಪ್ರಕಾಶ್ ಪೂಜಾರಿ, ದಿನೇಶ್ ಪಟ್ರಾಡಿ, ರಾಜೇಶ್ ನಡಾಯಿ, ಕೇಶವ ಕುಲಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.



