Breaking
26 Sep 2026, Sat

ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ :ಮೂರು ವರ್ಷದ ಮಗು ಮೃತ್ಯು

ಬೆಳ್ತಂಗಡಿ : ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಡಿ.3ರಂದು ಚಾರ್ಮಾಡಿಯಲ್ಲಿ ನಡೆದಿದೆ.

ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಪುತ್ರ ಮುಹಮ್ಮದ್ ಹಝೀರಿನ್ ಮೃತಪಟ್ಟವರು.

ಮುಹಮ್ಮದ್ ಹಝೀರಿನ್ ತನ್ನ ಮನೆಯ ಬಳಿಯ ಅಂಗಡಿಗೆ ತಿಂಡಿ ತರಲು ಹೋಗಿ, ಹಿಂತಿರುಗುವಾಗ ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಕಾರು ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ .

ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *