ಬೆಳ್ತಂಗಡಿ: ನಾರಾವಿ ವಲಯದ ಸುಲ್ಕೇರಿ ಕಾರ್ಯಕ್ಷೇತ್ರದ ಮುಳ್ಳಗುಡ್ಡೆ ಬಳಿ ನಿರ್ಮಾಣಗೊಳ್ಳುತ್ತಿರುವ ಹಿಂದೂರುದ್ರ ಭೂಮಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹ 1,60,000 ಮೌಲ್ಯದ ಸಿಲಿಕಾನ್ ಚೆಂಬರ್ ಮಂಜೂರಾತಿಯಾಗಿದೆ.

ಈ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಅಶೋಕ ಬಿ ಹಾಗೂ ನಿವೃತ್ತ ನಿರ್ದೇಶಕರಾದ ವಿಶ್ವನಾಥ ಶೆಟ್ಟಿ ಸುಲ್ಕೆರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಕೊರಗಪ್ಪ ನಾಯ್ಕ ರಲ್ಲಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು ಶುಭಕರ ಪೂಜಾರಿ ಸದಸ್ಯರಾದ ನಾರಾಯಣ ಪೂಜಾರಿ, ಪ್ರೇಮ, ರವಿ, ಪಂಚಾಯತ್ ಸಿಬ್ಬಂದಿಯಾದ ದಿನೇಶ , ಸುಪ್ರಿಯಾ, ಬಾಸ್ಕರ ಗ್ರಾಮಸಮಿತಿ ಅಧ್ಯಕ್ಷರಾದ ರಾಮಶೆಟ್ಟಿ ಜನ ಜಾಗೃತಿ ಸದಸ್ಯರಾದ ಸದಾನಂದ ಗೌಡ ಒಕ್ಕೂಟದ ಉಪಾಧ್ಯಕ್ಷರಾದ ಕೀರ್ತನ್ ಪೂಜಾರಿ ವಿಪತ್ತು ಸಂಯೋಜಕರಾದ ದಿನೇಶ ಶೆಟ್ಟಿ ವಲಯದ ಮೇಲ್ವಿಚಾರಕರಾದ ವಿಶಾಲ ಕೆ ಸೇವಾಪ್ರತಿನಿಧಿ ಮಮತ ಶೆಟ್ಟಿ ಉಪಸ್ಥಿತರಿದ್ದರು.





