Breaking
9 Aug 2026, Sun

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ತಾಲೂಕು ಕೆಯ್ಯೂರು ಗ್ರಾಮದ ಪೊಯ್ಯೊಲೆ ಎಂಬಲ್ಲಿ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ. 23 ರಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಗುಡ್ಡಪ್ಪ ರೈ ಎಂಬವರ ಪುತ್ರಿ ನೀತಾ ಎಂದು ಗುರುತಿಸಲಾಗಿದೆ.

ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ನೀತಾ 2016 ರ ನಂತರ ತಲೆನೋವು, ನರದೋಷ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಇವರು ಮಾನಸಿಕವಾಗಿ ಜರ್ಜರಿತಗೊಂಡಿದ್ದರು ಎನ್ನಲಾಗಿದೆ. ಮನೆಯವರು ಇಲ್ಲದ ವೇಳೆ ಕಿಟಕಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗುಡ್ಡಪ್ಪ ರೈ ಅವರು 20 ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿದ್ದು, ಅವರ ಪತ್ನಿ ಸುಮತಿ ಮಕ್ಕಳಾದ ಗೀತಾ ಮತ್ತು ನೀತಾ ಅವರೊಂದಿಗೆ ವಾಸವಾಗಿದ್ದರು.

ಈ ಕುರಿತು ಮೃತಳ ಅಕ್ಕ ಗೀತಾ ಪಿ. ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *