Breaking
23 Mar 2026, Mon

ವೀರಕಂಭ ಗ್ರಾಮದ ಮಂಗಲಪದವು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ವಿಟ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಮಂಗಲಪದವು ಅಂಗನವಾಡಿ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ಮಂಗಲಪದವು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು ನ. 25 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರೂಪಕಲಾ ಅವರು ಒಂದು ಗ್ರಾಮದಲ್ಲಿ ಮಾದರಿ ಅಂಗನವಾಡಿ ಆಗಬೇಕಾದರೆ ಮಕ್ಕಳ ಪೋಷಕರು ಹಾಗೂ ಊರಿನ ಸಂಘ ಸಂಸ್ಥೆ, ದಾನಿಗಳ ಸಹಕಾರ ಮುಖ್ಯವಾಗಿರುತ್ತೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ತಾಹಿರಬಾನು ವಹಿಸಿದ್ದರು. ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪುಟಾಣಿ ಮಕ್ಕಳ ಛದ್ಮವೇಷ ಸ್ಪರ್ಧೆ ಗಮನಸೆಲೆಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿಗೆ ಮಾಡಿದ ವಿವಿಧ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಈ ವೇಳೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೊಳಿಮಾರ್, ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಸುಗ್ರಾಮ ಜಿಲ್ಲಾ ಸಂಯೋಜಕ ಚೇತನ್, ಸಂಜೀವಿನಿ ಒಕ್ಕೂಟದ ಎಮ್ ಬಿ ಕೆ ಮಲ್ಲಿಕಾ , ಎಲ್ ಸಿ ಆರ್ ಪಿ ಗಳಾದ ಜಯಂತಿ, ರೂಪ, ಆಶಾ ಕಾರ್ಯಕರ್ತೆರಾದ ಶಶಿಕಲಾ, ರೋಸೀನಾ ಮೊಂತೆರೊ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ಎಸ್, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಸೌಮ್ಯ, ಚಿನ್ನಾ ಕಲ್ಲಡ್ಕ, ಶರೀಫ್ ಮೊದಲಾದವರು ಉಪಸ್ಥಿತರಿದ್ದರು.

ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಕೆಲಿಂಜೇಶ್ವರಿ, ಕಟಿಲೇಶ್ವರಿ, ಆದೀಶ್ವರಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಭಾಗವಹಿಸಿದ್ದರು.

ಅಂಗನವಾಡಿ ಪುಟಾಣಿಗಳು ಪ್ರಾರ್ಥಿಸಿ , ಆಯಿಷಾ ಬೀಬಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶೃತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು, ಬೊನ್ಯಕುಕ್ಕು ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸಹಕರಿಸಿದರು.

Leave a Reply

Your email address will not be published. Required fields are marked *