ನವದೆಹಲಿ: ಪಿಟ್ ಬುಲ್ ನಾಯಿ ಬಾಲಕನ ಮೇಲೆ ದಾಳಿ ನಡೆಸಿ ಕಿವಿಯನ್ನೇ ಕಳೆದುಕೊಂಡ ಘಟನೆ ನವದೆಹಲಿ ವಾಯುವ್ಯ ದೆಹಲಿಯ ಪ್ರೇಮ್‌ನಗರ ಪ್ರದೇಶದಲ್ಲಿ ನಡೆದಿದೆ.
ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕನ ಮೇಲೆ ವಾಕಿಂಗ್ ಕರೆದುಕೊಂಡು ಬಂದಿದ್ದ ಮಹಿಳೆ ಪಿಟ್ ಬುಲ್ ನಾಯಿ ಇದ್ದಕ್ಕಿದ್ದಂತೆ ಹುಡುಗನ ಮೇಲೆ ದಾಳಿ ನಡೆಸಿದೆ.

ಪಿಟ್ ಬುಲ್ ನಾಯಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದರು ನಾಯಿ ನಿಯಂತ್ರಣಕ್ಕೆ ಸಿಗದೇ ಬಾಲಕನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯಲ್ಲಿ ಬಾಲಕ ಕಿವಿಯೊಂದನ್ನು ಕಳೆದುಕೊಂಡಿದ್ದಾನೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ನಾಯಿ ಮಾಲಕಿಯನ್ನು ಹಾಗೂ ಮಾಲಕ ರಾಜೇಶ್ ಪಾಲ್ ಅವರನ್ನು ಬಂಧಿಸಲಾಗಿದೆ.





