Breaking
25 Sep 2026, Fri

ಕಡಬದಲ್ಲಿ ಜನಗಣತಿ ಮಾಡುತ್ತಿದ್ದ ಶಿಕ್ಷಕಿಯ ಕಾರಿಗೆ ಹಾನಿ

ಕಡಬ: ಜನಗಣತಿ ಕಾರ್ಯ ಮಾಡುತ್ತಿದ್ದ ಶಿಕ್ಷಕಿಯ ಕಾರಿಗೆ ವ್ಯಕ್ತಿಯೊಬ್ಬರು ಹಾನಿ ಮಾಡಿರುವ ಘಟನೆ ಕಡಬ ತಾಲೂಕಿನಲ್ಲಿ ಕೋಡಿಂಬಾಳ ವಾರ್ಡ್ ಸಂಖ್ಯೆ 13ರಲ್ಲಿ ಅ.5 ರಂದು ನಡೆದಿದೆ.

ಕೊಣಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಮಣಿ ಬಿ ಎಂಬವರು ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ ಮಾಡುತ್ತಿದ್ದರು.

ಈ ವೇಳೆ ಶಂಕರ ಪಾಜೋವು ಎಂಬವರು ರಸ್ತೆ ಬದಿಯಲ್ಲಿದ್ದ ಶಿಕ್ಷಕಿಯ ಕಾರಿಗೆ ಕಬ್ಬಿಣದ ರಾಡ್ ನಿಂದ ಹಾನಿಗೊಳಿಸಿ ಕಾರಿನ ಹಿಂಬದಿ ಗಾಜನ್ನು ಪುಡಿಗೈದಿದ್ದಾರೆ. ಈ ಬಗ್ಗೆ ರಮಣಿಯವರು ಕಡಬ ಠಾಣೆ ಹಾಗೂ ಕಡಬ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಆರೋಪಿ ಶಂಕರ ಪಾಜೋವುರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

Leave a Reply

Your email address will not be published. Required fields are marked *