Breaking
22 Mar 2026, Sun

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟೂರಿಸ್ಟ್ ಕಾರು ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟೂರಿಸ್ಟ್ ಕಾರು ಡಿಕ್ಕಿಯಾದ ಘಟನೆ ಆರ್ಯಾಪು ಗ್ರಾಮದ ಸಂಟ್ಯಾರು–ಪರ್ಪುಂಜ ಬಳಿ ಇಂದು( ಸೆ.22) ಮಧ್ಯಾಹ್ನ ನಡೆದಿದೆ.

ಬಸ್‌ ಪುತ್ತೂರಿನಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದು, ಕಾರು ಸುಳ್ಯ ಕಡೆಯಿಂದ ಪುತ್ತೂರಿನತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು. ಕಾರಿನಲ್ಲಿದ್ದವರು ಹಾಗೂ ಬಸ್‌ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *