Breaking
9 Aug 2026, Sun

ಕಡಬದಲ್ಲಿ ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದಾಗ ಮಹಿಳೆ ಕೆರೆಗೆ ಬಿದ್ದು ಸಾವು

ಕಡಬ: ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದಾಗ ಮಹಿಳೆ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಡಬದಲ್ಲಿ ನಡೆದಿದೆ.

ಐತ್ತೂರು ನಿವಾಸಿ ಲಿಂಗಪ್ಪ ಗೌಡ ಅವರ ಪತ್ನಿ ಜಾನಕಿ (60) ಮೃತ ಮಹಿಳೆಯಾಗಿದ್ದಾರೆ.

ಗುರುವಾರ ಮಧ್ಯಾಹ್ನ ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದ ಜಾನಕಿ ಅವರು ಸಂಜೆ 6 ಗಂಟೆಯಾದರೂ ಮರಳಿ ಬಾರದೇ ಇದ್ದುದರಿಂದ ಲಿಂಗಪ್ಪ ಗೌಡರು ಪತ್ನಿಯನ್ನು ಹುಡುಕಿಕೊಂಡು ತೋಟದ ಬಳಿಗೆ ಹೋದಾಗ ಕೆರೆಯ ನೀರಿನಲ್ಲಿ ಜಾನಕಿ ಅವರ ಚಪ್ಪಲಿಗಳು ತೇಲುತ್ತಿರುವುದು ಕಂಡು ಬಂದಿದೆ.

ಬಳಿಕ ಸ್ಥಳಿಯರ ಸಹಾಯದಿಂದ ಹುಡುಕಾಟ ನಡೆಸಿದಾಗ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎನ್ನಲಾಗಿದೆ.

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *