ಕೊಕ್ಕರ್ಣೆಯಲ್ಲಿ ಯುವತಿಯನ್ನು ಚುಚ್ಚಿ ಭೀಕರವಾಗಿ ಹತ್ಯೆಗೈಯಲು ಯತ್ನಿಸಿದ ಪಾಗಲ್ ಪ್ರೇಮಿ

ಉಡುಪಿ: ಮದುವೆಗೆ ಒಪ್ಪದ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆಗೈಯಲು ಯತ್ನಿಸಿದ ಘಟನೆ ಬ್ರಹ್ಮಾವರ ತಾಲ್ಲೂಕು ಕೊಕ್ಕರ್ಣೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವತಿಯನ್ನು ಕೊಕ್ಕರ್ಣೆ ಪೂಜಾರಿಬೆಟ್ಟು ನಿವಾಸಿ ರಕ್ಷಿತಾ (20) ಎಂದು ಗುರುತಿಸಲಾಗಿದೆ. ಯುವತಿ ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಕಾರ್ತಿಕ್ ಪೂಜಾರಿ ಎನ್ನುವಾತ ಏಕಾ ಏಕಿ ಬೈಕಿನಲ್ಲಿ ಬಂದು ನೇರವಾಗಿ ಚಾಕುವಿನಿಂದ ಚುಚ್ಚಿ ಕೊಲೆಗೈಲಯ ಯತ್ನಿಸಿದ್ದಾನೆ.

ಇವತ್ತು ಯುವತಿಯ ಹುಟ್ಟುಹಬ್ಬವಾಗಿದ್ದರಿಂದ ಆ ದಿನವೇ ಯುವತಿಯನ್ನು ಕೊಲೆಗೈಯುವ ಉದ್ದೇಶದಿಂದ ಯುವತಿಗೆ ಚಾಕುವಿನಿಂದ ಚುಚ್ಚಿ ಬೈಕ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಸದ್ಯ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *