ಕಣ್ಣೂರಿನಲ್ಲಿ ಹೆಬ್ಬಾವು ಕೊಂದು ಪದಾರ್ಥ ಮಾಡಿ ತಿಂದ ಇಬ್ಬರು ಅರೆಸ್ಟ್

ಕಣ್ಣೂರು: ಹೆಬ್ಬಾವು ಕೊಂದು ಪದಾರ್ಥ ಮಾಡಿ ತಿಂದ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ.

ಮಾದಮಂಗಲ ಮುಂಡಕೈ ನಿವಾಸಿಗಳಾದ ಯು.ಪ್ರಮೋದ್(40), ಬಿನೀಶ್ (37) ಬಂಧಿತ ಆರೋಪಿಗಳು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಪ್ರಮೋದ್ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ಹೆಬ್ಬಾವು ಪದಾರ್ಥ, ಅದರ ಮೂಳೆಗಳು, ಪಾತ್ರೆಗಳು ಲಭಿಸಿತ್ತು. ಪ್ರಮೋದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಲಭಿಸಿದ ಮಾಹಿತಿಯಂತೆ ಬಿನೀಶ್ ಸೆರೆಯಾಗಿದ್ದಾನೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.

Leave a Reply

Your email address will not be published. Required fields are marked *