Breaking
25 Sep 2026, Fri

ಸರ್ಕಾರದ ಪರಿಹಾರ ಪಡೆಯುವುದಕ್ಕೆ ಪತಿಯನ್ನೇ ವಿಷ ಹಾಕಿ ಸಾಯಿಸಿದ ಪತ್ನಿ

ಹುಣಸೂರು: ಸರ್ಕಾರದ ಪರಿಹಾರ ಪಡೆಯುವ ಸಲು ವಾಗಿ ಪತಿಯನ್ನೇ ವಿಷ ಹಾಕಿ ಸಾಯಿಸಿದ ಪತ್ನಿ ಸಿಕ್ಕಿ ಬಿದ್ದಿರುವ ಘಟನೆ ಹುಣಸೂರಿನ ಹನಗೋಡಿಗೆ ಸಮೀಪದ ಚಿಕ್ಕಹೆಜ್ಜೂರಿನ ತೋಟದ ಮನೆಯಲ್ಲಿ ನಡೆದಿದೆ.

ಮಳವಳ್ಳಿ ತಾಲೂಕಿನ ಕದಂಪೂರ ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಸೊಲ್ಲಾಪುರಿಯೇ ಕೊಲೆ ಮಾಡಿರುವ ಆರೋಪಿಯಾಗಿದ್ದಾಳೆ.

ವರ್ಷದ ಹಿಂದೆ ವೆಂಕಟಸ್ವಾಮಿ-ಸೊಲ್ಲಾಪುರಿ ಮನೆ ನಿರ್ಮಿಸಲು 10 ಲಕ್ಷ ಹಾಗೂ ಕೈ ಸಾಲ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ಸಾಕಷ್ಟಿದ್ದ ರಿಂದ ವೆಂಕಟಸ್ವಾಮಿ ಕುಡಿತದ ಚಟ ಅಂಟಿಸಿಕೊಂಡಿದ್ದು ಈ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು.

ವನ್ಯಜೀವಿಗಳ ದಾಳಿಗೆ ಒಳಗಾದಲ್ಲಿ ಸರಕಾರದಿಂದ 15 ಲಕ್ಷ ರೂ. ಪರಿಹಾರ ಸಿಗಲಿದೆ ಮಾಹಿತಿ ಪಡೆದಿದ್ದ ಈಕೆ ಇದಕ್ಕಾಗಿ ಗಂಡನನ್ನೇ ಬಲಿ ಕೊಲೆ ಮಾಡಲು ನಿರ್ಧರಿಸಿ ಮಂಗಳವಾರ ರಾತ್ರಿ ಕುಡಿದು ಬಂದಿದ್ದ ಗಂಡನಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಹಾಕಿದ್ದಾಳೆ.

ಬೆಳಗಾಗುವುದರೊಳಗೆ ಸಾವನ್ನಪ್ಪಿದ್ದ ಗಂಡನ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾಳೆ. ಶವ ಅರೆ ಬರೆ ಬೆಂದಿದ್ದು ಗಾಬರಿಗೊಂಡ ಆಕೆ ತಿಪ್ಪೆಯಲ್ಲಿ ಮುಚ್ಚಿದ್ದಾಳೆ.

ಗಂಡ ನಾಪತ್ತೆಯಾಗಿದು ಯಾವುದೋ ಕಾಡು ಪ್ರಾಣಿ ಹೊತ್ಯೊಯ್ದಿರಬೇಕೆಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ.

ಸ್ಥಳ ಪರಿಶೀಲನೆಗೆ ತೆರಳಿದ್ದ ಇನ್‌ಸ್ಪೆಕ್ಟರ್ ಮುನಿಸ್ವಾಮಿ ಮತ್ತು ಪೊಲೀಸ್ ತಂಡಕ್ಕೆ ಈಕೆಯ ವರ್ತನೆಯಿಂದ ಅನುಮಾನ ಬಂದು ವಿಚಾರಣೆಗೆ ಒಳಪಡಿಸಲಾಗಿ ತಾನು ಸಾಲ ತೀರಿಸಲು ಮಾಡಿದ ಪ್ಲ್ರಾನ್ ಎಂದು ಒಪ್ಪಿಕೊಂಡಿದ್ದಾಳೆ.

Leave a Reply

Your email address will not be published. Required fields are marked *