ಮಂಗಳೂರು : ನಗರದ ಕಮಿಷನರೆಟ್ ವ್ಯಾಪ್ತಿಯಲ್ಲಿ ಕೋಮುಗಲಭೆ ಸೇರಿದಂತೆ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಎರಡು ವರ್ಷ ಗಳಿಂದ ತಲೆಮರೆಸಿಕೊಂಡಿದ್ದ 52 ಆರೋಪಿಗಳನ್ನು 3 ತಿಂಗಳ ಅವಧಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಮುಗಲಭೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ ಚಂದ್ರಹಾಸ ಕೇಶವ ಶೆಟ್ಟಿಗಾರ್, ಲೀಲಾಧರ್, ಖಾದರ್ ಕುಳಾಯಿ, ಶಾಕೀಬ್, ಮೊಹಮ್ಮದ್ ಹುಸೇನ್, ರಮೀಜ್, ವಿವಿಧ ಪೊಲೀಸ್ ಠಾಣೆ ಗಳಲ್ಲಿ ರೌಡಿ ಶೀಟರ್ಗಳಾಗಿರುವ ಆದಿತ್ಯ ಕುಮಾರ್, ಭರತ್ ಬಾಲು, ಮೊಹಮ್ಮದ್ ಸುಹೈಬ್, ಮೊಹಮ್ಮದ್ ಮುಸ್ತಾಫ್, ಮೊಹಮ್ಮದ್ ನಜೀಮ್, ಉಮ್ಮರ್ ನವಾಫ್, ಉಮ್ಮರ್ ಫಾರೂಕ್, ಫರಾಜ್, ಮೊಹಮ್ಮದ್ ನಿಯಾಜ್, ಎನ್ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಪುಂಪಾ ಕಾಶಿ, ದೀಪಾ ನಾರಾಯಣ, ಮೊಹಮ್ಮದ್ ನಿಹಾಲ್, ಮೊಹಮ್ಮದ್ ಶಫೀಕ್, ಬಾಬರ್ ಪಾಷಾ, ಮೊಹಮ್ಮದ್ ಇಕ್ಬಾಲ್, ಅಬೂಬಕರ್, ಕೊಲೆ ಪ್ರಕರಣದಲ್ಲಿ ಭಾಗಿಯಾದ ಶಾನವಾಜ್ ಅಲಿಯಾಸ್ ಶಾನ್ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಒಳಗೊಂಡಿರುವ ಗಣೇಶ್ ಲಕ್ಷ್ಮಣ್ ಸಾಕೇತ್, ಅದಿತ್ಯ ಕುಮಾರ್, ಅಬ್ದುಲ್ ನಾಸೀರ್, ಇಮ್ರಾನ್ ಅಲಿಯಾಸ್ ಇಂಬು, ರಮೀಜ್, ಮೊಹಮ್ಮದ್ ನಜೀಮ್ ಬಂಧಿತರು.

ಹಲವಾರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಿಶಾಲ್ ಕುಮಾರ್, ಮೊಹಮ್ಮದ್ ನಿಹಾಲ್, ಇರ್ಷಾದ್, ಹನೀಫ್ ಕೊಕ್ಕಡ ಸೇರಿದಂತೆ 12 ಜನ ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಕಲಂ 208, 209 269, ಬಿಎನ್ಎಸ್ನಂತೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.




