ಪುತ್ತೂರು: ಮುಸಲ್ಮಾನರಿಗೆ ಚಿನ್ನದಿಂದ ಹಿಡಿದು ಎಲ್ಲದರಲ್ಲೂ ಹಲಾಲ್ ಬೇಕು. ಆದರೆ ಯಾರ್ಯಾರ ಮನೆಯ ಗೋವನ್ನು ಕದ್ದು ತಿನ್ನೋವಾಗ ಅದಕ್ಕೆ ನಿಮ್ಮ ಅಪ್ಪ ಬಂದ ಹಲಾಲ್ ಸರ್ಟಿಫಿಕೇಟ್ ನೀಡುತ್ತಾರಾ? ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಗಣರಾಜ್ ಭಟ್ ಆಕ್ರೋಶ ಹೊರಹಾಕಿದ್ದಾರೆ.

ಉಪ್ಪಿನಂಗಡಿಯ ಕಡಂಬು ಎಂಬಲ್ಲಿ ನಡೆದ ಚಳವಳಿಯನ್ನು ಉದ್ದೇಶಿ ಮಾತನಾಡಿದ ಅವರು ಎಲ್ಲಾ ಮುಸ್ಲಿಮರೂ ಕಟ್ಟವರಲ್ಲ ಎಂದು ಹೇಳಲಾಗುತ್ತೆ. ಆದರೆ ಹಿಂದೂಗಳ ಮನೆಗೆ ನುಗ್ಗಿ ಗೋವುಗಳನ್ನು ಕದ್ದು ಮಾಂಸ ಮಾಡುವಾಗ ಈ ಒಳ್ಳೆಯ ಮುಸಲ್ಮಾನರು ಮಾತನಾಡುವುದಿಲ್ಲ, ಪ್ರತಿಭಟನೆಯನ್ನು ಮಾಡೋದಿಲ್ಲ. ಗೋಕಳ್ಳರಿಗೆ ಮಸೀದಿಯೊಳಗೆ ಪ್ರವೇಶವಿಲ್ಲ ಎಂದು ಧರ್ಮಗುರುಗಳು ಹೇಳೋದಿಲ್ಲ. ಹಟ್ಟಿಯಿಂದ ಗೋವನ್ನು ಕದ್ದು ಕೊಂದ ಆರೋಪಿಗಳನ್ನು ಹಿಡಿದಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಆರೋಪಿಗಳ ಮಹಜರು ಪ್ರಕ್ರಿಯೆಯನ್ನು ಪೊಲೀಸರು ಸರಿಯಾಗಿ ಮಾಡಬೇಕು. ಘಟನೆ ನಡೆದ ಸ್ಥಳದಿಂದ ಮುಂದೆ ಅವರನ್ನು ಪೊಲೀಸ್ ಜೀಪ್ ನಿಂದ ಇಳಿಸಬೇಕು.


ಆರೋಪಿಗಳಲ್ಲಿ ಗೋವುಗಳನ್ನು ಕದ್ದ ಮನೆ ತೋರಿಸು ಎಂದು ಪೋಲೀಸರು ಹೇಳಬೇಕು. ನಾವು ಕೂಡಾ ಪೊಲೀಸರ ಹಿಂದೆ ಬರುತ್ತೇವೆ. ನೈಜ ಆರೋಪಿಗಳಾಗಿದ್ದರೆ ಗೋವನ್ನು ಕದ್ದ ಮನೆಯನ್ನು ತೋರಿಸುತ್ತಾರೆ. ಇಲ್ಲದೇ ಹೋದಲ್ಲಿ ಇದು ಪೋಲೀಸರು ಫಿಕ್ಸ್ ಮಾಡಿರುವ ಆರೋಪಿಗಳು ಎಂದು ತಿಳಿಯುತ್ತದೆ ಎಂದರು.



