ಪುತ್ತೂರು: ಹಲವು ಭಾಗ್ಯಗಳನ್ನು ನೀಡಿರುವ ಕರ್ನಾಟಕ ಸರಕಾರ ಇನ್ನೊಂದು ಭಾಗ್ಯವನ್ನು ಗೋಮಾಂಸ ಭಕ್ಷಕರಿಗೆ ನೀಡಬೇಕು. ಗೋ ಭಕ್ಷಕ ಕುಟುಂಬಗಳಿಗೆ ಎರಡೆರಡು ಹಂದಿ ಮರಿಗಳನ್ನು ನೀಡಬೇಕು. ಕದ್ದು ಗೋವುಗಳನ್ನು ತಿನ್ನುವವರು ಹೀಗೆ ಮಾಡಿದಲ್ಲಿ ಕದಿಯಲು ಮುಂದಾಗುವುದಿಲ್ಲ ಎಂದು ಹಿಂದೂ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಉಪ್ಪಿನಂಗಡಿಯ ಕಡಂಬು ಎಂಬಲ್ಲಿ ಸೆ.4 ರಂದು ದೇಜಪ್ಪ ಮೂಲ್ಯದ ಎರಡು ವರ್ಷದ ಗಬ್ಬದ ಹಸುವನ್ನು ಕದ್ದು ಮಾಲಿಕರ ತೋಟದಲ್ಲಿಯೇ ಕೊಂದು ಮಾಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಪ್ಪಿನಂಗಡಿಯ ಕಡಂಬು ಎಂಬಲ್ಲಿ ನಡೆದ ಗೋ ಮಾತಾ ಸಂರಕ್ಷಣಾ ಚಳುವಳಿಯನ್ನು ಉದ್ದೇಶಿ ಅವರು ಮಾತನಾಡಿದರು.

ಮತ್ತು ಮುಂದುವರಿದು ಮಾತನಾಡಿರುವ ಅವರು ಗೋ ಕಳ್ಳರು ಕದ್ದು ತಿನ್ನುವ ಗೋವುಗಳು ದೇಸೀ ತಳಿಗಳಲ್ಲ. ಅದು ಜರ್ಸಿ ಜಾತಿಗೆ ಸೇರಿದ ಗೋವುಗಳು. ಈ ಗೋವುಗಳನ್ನು ಹಂದಿಯ ಇಂಜೆಕ್ಷನ್ ನೀಡಿ ಹುಟ್ಟಿಸಲಾಗುತ್ತದೆ. ಆ ಗೋವುಗಳನ್ನು ತಿಂದಲ್ಲಿ ಹಂದಿ ತಿಂದಂತೆಯೇ. ಯಾವ ಯಾವ ಮಾಂಸ ತಿನ್ನುವ ಬದಲು ಹಂದಿ ಮಾಂಸವನ್ನೇ ತಿನ್ನಲಿ. ಸರಕಾರ ಈ ಮನವಿಯನ್ನು ಪುರಸ್ಕರಿಸಿ ತಕ್ಷಣ ಹಂದಿ ಮರಿಗಳನ್ನು ನೀಡುವ ವ್ಯವಸ್ಥೆ ಮಾಡಲಿದೆ. ಅವರಿಗಾಗಿ ಶಾದಿ ಭಾಗ್ಯ ಮತ್ತು ಏನೆಲ್ಲಾ ಭಾಗ್ಯ ನೀಡಿದೆ. ಈ ಭಾಗ್ಯವನ್ನೂ ಖಂಡಿತವಾಗಿ ನೀಡಲು ಸರಕಾರ ಸಿದ್ಧವಿರಬಹುದು.

ಗೋ ಭಕ್ಷಣೆ ಮಾಡದ, ಗೋವುಗಳನ್ನು ಸಂರಕ್ಷಿಸುವ ಹಲವು ಮುಸಲ್ಮಾನರಿದ್ದಾರೆ. ಅವರಿಗೆ ಈ ಮಾತು ಅನ್ವಯವಾಗೋದಿಲ್ಲ. ಇದು ಕೇವಲ ಗೋಭಕ್ಷಕರಿಗೆ ಮಾತ್ರ ಅನ್ವಯ. ಯಾವ ಆಹಾರ ತಿನ್ನಬೇಕು ಅನ್ನೋದು ಜನರ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಸರಕಾರ ಹೇಳಿದೆ. ಹಾಗಾದಲ್ಲಿ ಅವರು ತಮ್ಮ ಅಕ್ಕ, ಮುದಿ ತಾಯಿಯನ್ನೂ ಕೊಂದು ಮಾಂಸ ತಿನ್ನಲಿ. ಅದು ಅವರ ತಿನ್ನುವ ಹಕ್ಕು. ಆದರೆ ಹಿಂದೂಗಳ ಮಾತೃಸ್ವರೂಪಿ ಗೋವುಗಳ ಹತ್ಯೆಯನ್ನು ಹಿಂದೂ ಸಮಾಜ ಸಹಿಸೋದಿಲ್ಲ ಎಂದರು.



