Breaking
20 Sep 2026, Sun

ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೆ ಆಗಮಿಸಿದ ಎಸ್ಐಟಿ ತಂಡ

ಧರ್ಮಸ್ಥಳ: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದಲ್ಲಿ ಎಸ್.ಐ.ಟಿ ತಂಡವು ಇಂದು ಹೊಸ ಸ್ಥಳದಲ್ಲಿ ಪರಿಶೀಲನೆಯನ್ನು ಆರಂಭ ಮಾಡಿದೆ.

ಈ ನಿಟ್ಟಿನಲ್ಲಿ ಅನಾಮಿಕ ದೂರುದಾರನೊಂದಿಗೆ ಎಸ್.ಐ.ಟಿ ತಂಡವು ಧರ್ಮಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿಗೆ ಆಗಮಿಸಿದೆ.

ಕಳೆದ ಎರಡು ವಾರಗಳಿಂದ ನೇತ್ರಾವತಿ ಸ್ನಾನಘಟ್ಟದ ಸಮೀಪ ದೂರು ದಾರ ತೋರಿಸಿದ ಜಾಗದಲ್ಲಿ ಅಗೆಯುವ ಪ್ರಕ್ರಿಯೆ ನಡೆಸಲಾಗಿತ್ತು.

ಇದೀಗ ಹೊಸ ಸ್ಥಳಕ್ಕೆ ದೂರುದಾರನ ಜೊತೆ ಎಸ್ ಐಟಿ ತಂಡ ಬಂದಿರುವುದು ತೀವ್ರ ಸಾರ್ವಜನಿಜರಲ್ಲಿ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *