Breaking
24 Mar 2026, Tue

ಕುಡಿತ ಮತ್ತಿನಲ್ಲಿ ಪತ್ನಿಯ ಬರ್ಬರ ಹತ್ಯೆ: ಪತ್ನಿ ಕೊಂದ ಪತಿಯೂ ಕೆರೆಗೆ ಹಾರಿ ಆತ್ಮಹತ್ಯೆ

ಹಾವೇರಿ: ಕುಡಿತ ಮತ್ತಿನಲ್ಲಿ ಪತ್ನಿಯನ್ನು ಕೊಂದು ಪತಿ ಕೆರೆಗೆ ಹಾರಿದ ಘಟನೆ ಹಾವೇರಿ ತಾಲೂಕು ನಜೀಕ ಲಕಮಾಪುರ ಗ್ರಾಮದಲ್ಲಿ ಆ.08 ನಡೆದಿದೆ.

ಲಲಿತವ್ವ (55 ) ಹತ್ಯೆಯಾದ ಮಹಿಳೆಯಾಗಿದ್ದಾರೆ. ಸಿದ್ದಪ್ಪ ಡಬ್ಬಣ್ಣವರ (60 ವ) ಕೊಲೆ ಆರೋಪಿಯಾಗಿದ್ದಾನೆ.

ಪತ್ನಿ ಲಲಿತವ್ವರನ್ನು ಹತ್ಯೆ ಮಾಡಿದ ಪತಿ ಸಿದ್ದಪ್ಪ ಗ್ರಾಮದ ಹೊರ ವಲಯದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾವುದೋ ಕಾರಣಕ್ಕೆ ಇವರಿಬ್ಬರ ಮಧ್ಯ ಜಗಳ ನಡೆದಿದ್ದು, ಈ ಜಗಳ ವಿಕೋಪಕ್ಕೆ ತಿರುಗಿ ಸಿದ್ದಪ್ಪ ಸಿಟ್ಟಿನಿಂದ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾನೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *