Breaking
12 May 2026, Tue

ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯಿಂದ ಪತ್ರಕರ್ತ ವಿ.ಜೆ.ಪಿ. ಸಲ್ಢಾನಾ ಬದುಕು ಬರಹ ಕುರಿತ ಜನ್ಮಶತಮಾನೋತ್ಸವದ ವಿಚಾರ ಸಂಕಿರಣ

ಮಂಗಳೂರು: ಸಾಹಿತ್ಯ ಅಕಾಡೆಮಿಯು (ರಾಷ್ಟ್ರೀಯ ಸಾಹಿತ್ಯ ಸಂಸ್ಥೆ) ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅಕಾಡೆಮಿಯು ಕೊಂಕಣಿ ಸಂಸ್ಥೆ, ಸಂತ ಅಲೋಶಿಯಸ್‌ (ಡೀಮ್ಢ್‌ ಟು ಬಿ ಯುನಿವರ್ಸಿಟಿ) ಮತ್ತು ವಿಷನ್‌ ಕೊಂಕಣಿ, ಮಂಗಳೂರು ಇವರ ಸಹಯೋಗದೊಂದಿಗೆ ಕೊಂಕಣಿ ಬರಹಗಾರ ಮತ್ತು ಪತ್ರಕರ್ತರಾದ ವಿ.ಜೆ.ಪಿ. ಸಲ್ಢಾನಾ ಅವರ ಬದುಕು ಬರಹ ಕುರಿತ ಜನ್ಮಶತಮಾನೋತ್ಸವ ವಿಚಾರ ಸಂಕೀರಣವನ್ನುಆ. 13 ಮತ್ತು 14 ರಂದು ರಾಬರ್ಟ್‌ ಸಿಕ್ವೇರಾ ಸಭಾಂಗಣ, ಸಂತ ಅಲೋಶಿಯಸ್‌ (ಡೀಮ್ಢ್‌ ಟು ಬಿ ಯುನಿವರ್ಸಿಟಿ), ನಡೆಯಲಿದೆ.

ಈ ವಿಚಾರ ಸಂಕೀರಣದ ಅಂಗವಾಗಿ ಸಾಹಿತ್ಯ ಅಕಾಡೆಮಿಯು ಮೂರು ದಿನಗಳ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ಮಾರಾಟವನ್ನು ಆಗಸ್ಟ್‌12 ರಿಂದ 14 2025 ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ಸಹೋದಯ ಸಭಾಂಗಣ, ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು-575003 ಇಲ್ಲಿ ಏರ್ಪಡಿಸಲಿದೆ. ಕನ್ನಡ, ಕೊಂಕಣಿ, ಮಲಯಾಳಂ, ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪುಸ್ತಕಗಳನ್ನು ಪ್ರದರ್ಶಿಸಲಾಗುವುದು.

ಸಾಹಿತಿಗಳು, ಸಾಹಿತ್ಯಾಸಕ್ತರು, ಶಿಕ್ಷಣ ತಜ್ಙರು, ವಿದ್ಯಾರ್ಥಿ ಮಿತ್ರರು ಈ ವಿಚಾರ ಸಂಕಿರಣಕ್ಕೆ ಆಗಮಿಸಿ, ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

Leave a Reply

Your email address will not be published. Required fields are marked *