Breaking
22 Aug 2026, Sat

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ) ಮಿಜಾರು ಇದರ 74ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ

ಮಂಗಳೂರು: ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ) ಮಿಜಾರು ಇದರ 74ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಮಂಗಳೂರು ಮೂಡು ಮೂರ್ನಾಡು ಪಲ್ಲ ಹೊಸಮನೆ ನಿವಾಸಿ ಭೋಜ ಇವರು 29-4-2026 ರಂದು ಹೈ ಬಿಪಿಯಿಂದ ಮೂರ್ಛೆ ತಪ್ಪಿದ್ದು, ಈಗ ಇವರು ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಗೆ ಇದುವರೆಗೆ 4 ಲಕ್ಷ ಖರ್ಚಾಗಿದ್ದು, ಇನ್ನು ಆಸ್ಪತ್ರೆಯಲ್ಲಿದ್ದು ಖರ್ಚು ನಿಭಾಯಿಸಲು ಕಷ್ಟವಾಗುತ್ತಿದೆ. ಇವರಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗ ಬುದ್ಧಿಮಾಂದ್ಯ ಆಗಿದ್ದು, ಹಾಗೇ ನಾನು ಮೂಡುಬಿದಿರೆ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದೇನೆ. ನಮ್ಮ ಮನೆಗೆ ಆಧಾರವಾಗಿದ್ದ ನನ್ನ ತಂದೆಯವರು ಹಾಸಿಗೆಯಲ್ಲಿದ್ದು, ನಮ್ಮ ಮನೆಗೆ ಹಾಗೂ ಆಸ್ಪತ್ರೆಯ ಖರ್ಚು ನಿಭಾಯಿಸಲು ಕಷ್ಟ ಆಗಿರುವುದರಿಂದ ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ಅವರ ಮಗಳು ಮನವಿ ಮಾಡಿದ್ದಾರೆ.

ಇವರ ಮನವಿಗೆ ಸ್ಪಂದಿಸಿ 15000 ರೂಪಾಯಿಯ ಚೆಕ್ಕನ್ನು ಶ್ರೀ ಆದಿಶಕ್ತಿ(ಮಾರಿಗುಡಿ) ದೇವಸ್ಥಾನ ಮೂಡಬಿದ್ರಿ ಇದರ ಮೊಕ್ತೇಸರು ರಾಜಮೋಹನ್ ಶೆಟ್ಟಿ ಇವರ ಹಸ್ತದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷರಾದ ಸಂದೀಪ್ ಮಿಜಾರ್ ಕಾರ್ಯದರ್ಶಿ ದಯಾನಂದ ಉರ್ಕಿ ಸೇವಾ ಮಾಣಿಕ್ಯ ಯತೀಶ್ ಮಾರ್ನಾಡ್ ಉಪಸ್ಥಿತರಿದ್ದರು.

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರು ಇದರ ಕಾರ್ಯವಿಭಾಗದ ವತಿಯಿಂದ ತುಂಬು ಹೃದಯದ ಕೃತಜ್ಞತೆ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *