Breaking
22 Aug 2026, Sat

ಭಕ್ತರ ನಡೆ ಸಾಗುವಳಿಯ ಕಡೆ: ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಭತ್ತದ ನಾಟಿ

ಬಂಟ್ವಾಳ: ಸಜೀಪ ಮೂಡದ ಅನ್ನಪಾಡಿಯ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪರ್ವಕಾಲದಲ್ಲಿ ಭಕ್ತರಿಗೆ ತೆನೆ ವಿತರಿಸುವ ಉದ್ದೇಶದಿಂದ ದೇವಾಲಯದ ಗದ್ದೆಯಲ್ಲಿ ಭತ್ತದ ಬೇಸಾಯದ ಅಂಗವಾಗಿ ಸಾಮೂಹಿಕ ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ, ಪ್ರಶಾಂತ್ ಪೂಜಾರಿ, ಲಿಂಗಪ್ಪ ದೋಟ, ಸುರೇಶ್ ಬಂಗೇರ, ಶಂಕರ ಕುಲಾಲ್, ಸಂತೋಷ್ ಬೊಳ್ಳಾಯಿ, ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಸೇರಿದಂತೆ ಹಲವರು ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *