ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಘಟಕ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಜಕ್ರಿಬೆಟ್ಟು ಎಂಬಲ್ಲಿ ನೇಯ್ಗೆ ಮೂಲಕ ಸೀರೆ ತಯಾರಿ ಉದ್ಯಮ ನಡೆಸುತ್ತಿರುವ ಮಧುಸೂಧನ್-ರಾಧಿಕಾ ಶೆಟ್ಟಿಗಾರ್ ದಂಪತಿಯನ್ನು ಆ. 07 ರಂದು ಸನ್ಮಾನಿಸಲಾಯಿತು.

ಈ ದಂಪತಿ ಕಳೆದ 11 ವರ್ಷಗಳಿಂದ ಮನೆಯಲ್ಲೇ ಸ್ವತಃ ನೇಯ್ಗೆ ಮೂಲಕ ರೇಶ್ಮೆ ಸೀರೆ ತಯಾರಿ ಉದ್ಯಮ ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಎನ್. ಶೆಟ್ಟಿ, ಉಪಾಧ್ಯಕ್ಷೆ ಜಯಶ್ರೀ ಅಶೋಕ್ ಕಲ್ಲಡ್ಕ, ರೂಪಾ ಶೆಟ್ಟಿ ಅರಳ, ಮಂಡಲ ಕಾರ್ಯದಶರ್ಿ ಹಷರ್ಿಣಿ ಪುಷ್ಪಾನಂದ ಪಿಲಾತಬೆಟ್ಟು, ಕಾರ್ಯದಶರ್ಿ ವಿಜಯ ನಾಯಕ್, ಪ್ರಮುಖರಾದ ರಜನಿ ಚಿಕ್ಕಯಮಠ, ವನಿತಾ ಕನ್ಯಾನ, ತ್ರಿವೇಣಿ ನಾವೂರ, ಸುಜಾತಾ ಅನಂತಾಡಿ, ಹರಿಣಾಕ್ಷಿ ಕೊಳ್ನಾಡು ಮತ್ತಿತರರು ಉಪಸ್ಥಿತರಿದ್ದರು.



