Breaking
1 Jul 2026, Wed

ಬಂಟ್ವಾಳ: ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ

ಬಂಟ್ವಾಳ: ತಾಲೂಕಿನ ಮೇರಮಜಲ್ ಗ್ರಾಮದಲ್ಲಿ ವಿದ್ಯುತ್ ತಂತಿಗೆ ಕಬ್ಬಿಣದ ಪೈಪ್ ತಗುಲಿ 58 ವರ್ಷದ ಎ. ಇಸ್ಮಾಯಿಲ್ ಅವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ಜೂನ್ 28ರ ಸಂಜೆ ಅಂಗಡಿಯ ಮುಂದೆ ಶೆಡ್ ನಿರ್ಮಾಣದ ವೇಳೆ, ಸುಮಾರು 20 ಅಡಿ ಉದ್ದದ ಕಬ್ಬಿಣದ ಪೈಪ್ ಅನ್ನು ಮೇಲಕ್ಕೆತ್ತಿದಾಗ ಅದು ಮೇಲಿನಿಂದ ಹಾದುಹೋಗುತ್ತಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಗುಲಿದೆ. ತೀವ್ರ ವಿದ್ಯುತ್ ಆಘಾತದಿಂದ ಇಸ್ಮಾಯಿಲ್ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿಎನ್‌ಎಸ್‌ಎಸ್ 2023ರ ಸೆಕ್ಷನ್ 194ರಡಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *