Breaking
21 Aug 2026, Fri

2026ನೇ ಸಾಲಿನ ಮಾಸಿಕ 13ನೇ ಸೇವಾ ಹಸ್ತಾಂತರ

ಬಿ.ಸಿ.ರೋಡ್: 2026ನೇ ಸಾಲಿನ ಜೂನ್ ತಿಂಗಳ ಮಾಸಿಕ 13ನೇ ಸೇವಾ ಯೋಜನೆ ಹಸ್ತಾಂತರ ಕಾರ್ಯಕ್ರಮ ದಿನಾಂಕ: 30.06.2026 ನೇ ಮಂಗಳವಾರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ, ಬಿ.ಸಿ.ರೋಡ್ ಇಲ್ಲಿ ಹಸ್ತಾಂತರ ಮಾಡಲಾಯಿತು.

ಕಡಬ ತಾಲೂಕಿನ ಪೆರಾಜೆ ಗ್ರಾಮದ ಸೋಮಶೇಖರ ಇವರು ಬೈಕ್ ಮತ್ತು ಕಾರು ಅಪಘಾತವೊಂದರಲ್ಲಿ ಇವರ ಕಾಲು ಸಂಪೂರ್ಣವಾಗಿ ಮುರಿತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿರುವ ಇವರ ಮುಂದಿನ ಚಿಕಿತ್ಸೆಗಾಗಿ ಮಾಸಿಕ ಸೇವಾ ಯೋಜನೆಯಲ್ಲಿ ರೂ.10,000/- ಧನ ಸಹಾಯವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಎಲ್ಲಾ ಸೇವಾ ಮಾಣಿಕ್ಯರು ಎಲ್ಲರೂ ಉಪಸ್ಥಿತರಿದ್ದರು. ಈ ಸೇವಾ ಕಾರ್ಯದ ಯಶಸ್ವಿಗೆ ಸಹಕಾರವನ್ನು ನೀಡಿದ ಸರ್ವರಿಗೂ ಕರುನಾಡು ಚಾರಿಟೇಬಲ್ ಟ್ರಸ್ಟ್(ರಿ.) ಕರ್ನಾಟಕ ಆಡಳಿತ ವಿಭಾಗದಿಂದ ಕೃತಜ್ಞತೆಯನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *