Breaking
12 May 2026, Tue

ಮಂಗಳೂರು : ಮಾದಕ ವಸ್ತು ಮಾರಾಟ ಆರೋಪ – ನಾಲ್ವರು ಪೊಲೀಸ್‌ ವಶಕ್ಕೆ

ಮಂಗಳೂರು: ನಗರದ ಬಂಗ್ರಕುಳೂರು ಬಳಿ ಸಾರ್ವಜನಿಕರಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಉಡುಪಿ ಉದ್ಯಾವರ ಸಂಪಿಗೆ ನಗರ ನಿವಾಸಿ ದೇವರಾಜ್ ಪೂಜಾರಿ (38), ಕಾಪು ಪಿಪಾರ್ ಪುದು ನಿವಾಸಿ ಜೀವನ್ ಅಮೀನ್ (32), ಮಂಗಳೂರು ತಿರುವೈಲು ನಿವಾಸಿ ಇಮ್ರಾನ್ (40), ದಂಬೆಲ್ ನಿವಾಸಿ ಇಮ್ರಾನ್ (40), ದಂಬೆಲ್ ನಿವಾಸಿ ಹನೀಫ್ (56) ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳಿಂದ 51 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ, 7 ಮೊಬೈಲ್ ಫೋನ್‌ಗಳು, ಎರಡು ಕಾರುಗಳು ಸಹಿತ ರೂ.11,990 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಪಡುಕೋಡಿ ಗ್ರಾಮದ ಬಂಗ್ರಕುಳೂರು ಬಳಿ ಎಂಡಿಎಂಎಯನ್ನು ಚಿಕ್ಕ ಚಿಕ್ಕ ಪ್ಯಾಕೇಟ್‌ಗಳಲ್ಲಿ ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *