Breaking
23 Mar 2026, Mon

ಆ.14 ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಶೀಂಟೂರು ಸ್ಮೃತಿ ಕಾರ್ಯಕ್ರಮ

ಪುತ್ತೂರು : ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ಶಿಂಟೂರು ಸ್ಮೃತಿ-2025' ಕಾರ್ಯಕ್ರಮ ಆ.14ರಂದು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯುವುದು ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದಸಹಕಾರಿ ರತ್ನ’ ಸವಣೂರು ಕೆ.ಸೀತಾರಾಮ ರೈ ಅವರು ತಿಳಿಸಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ನನ್ನ ತಂದೆ ದಿವಂಗತ ಶೀಂಟೂರು ನಾರಾಯಣ ರೈ ಅವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮದಲ್ಲಿ ಕರ್ತವ್ಯ ನಿರ್ವಸಿದ್ದರು.

ಸೇನಾ ನಿವೃತ್ತಿಯ ಬಳಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕೃಷಿಕರಾಗಿದ್ದುಕೊಂಡು ಸಹಕಾರಿ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು.ಅವರ ಪ್ರೇರಣೆಯಿಂದ ನಾನು 2001ರಲ್ಲಿ ವಿದ್ಯಾಗಂಗೋತ್ರಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದು, ಇಂದು ಸಂಸ್ಥೆಯು ನಿರಂತರವಾಗಿ ಉತ್ತಮ ಫಲಿತಾಂಶ ಮತ್ತು ಸರ್ವತೋಮುಖ ಸಾಧನೆಗಳೊಂದಿಗೆ ಮುಂದುವರಿಯುತ್ತಿದ್ದು, ಸಂಸ್ಥಾಪಕರ ದಿನಾಚರಣೆಯನ್ನು `ಶೀಂಟೂರು ಸ್ಮೃತಿ’ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

14ನೇ ವರ್ಷದ ಸ್ಥಾಪಕರ ದಿನಾಚರಣೆ `ಶೀಂಟೂರು ಸ್ಮೃತಿ’ ಕಾರ್ಯಕ್ರಮ ಆ.14ರಂದು ಬೆಳಿಗ್ಗೆ 10ಗಂಟೆಗೆ ಆರಂಭಗೊಳ್ಳುವುದು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎ.ಆರ್ ಅವರು ಉದ್ಘಾಟಿಸುವರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿರುವ ವಕೀಲ ಅಶ್ವಿನ್ ಎಲ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಇತ್ತೀಚೆಗೆ ನಿವೃತ್ತಿಗೊಂಡಿರುವ ಬಂಟ್ವಾಳದ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ ಅವರಿಗೆ ಶೀಂಟೂರು ಸನ್ಮಾನ ಪ್ರದಾನ ಮಾಡಲಾಗುವುದು.

ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಸನ್ಮಾನಿಸುವರು. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ ಸುಳ್ಯ ಅವರು ಶೀಂಟೂರು ಸಂಸ್ಮರಣೆ ಉಪನ್ಯಾಸ ಮಾಡುವರು. ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಎನ್.ಸುಂದರ ರೈ ನಡುಮನೆ ಅವರು ಅತಿಥಿಯಾಗಿ ಭಾಗವಹಿಸುವರು ಎಂದರು.

ಪ್ರತೀ ವರ್ಷ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಯ 10 ಮಂದಿ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಶಿಷ್ಯವೇತನ ನೀಡಲಾಗುತ್ತಿದೆ. ಈ ವರ್ಷ ತೃತೀಯ ಬಿಕಾಂ ವಿದ್ಯಾರ್ಥಿನಿ ಧನ್ಯಶ್ರೀ ಬಿ.ಡಿ, ತೃತೀಯ ಬಿಎ ವಿದ್ಯಾರ್ಥಿ ದೀಕ್ಷಿತ್ ಜಿ, ತೃತೀಯ ಬಿಸಿಎ ವಿದ್ಯಾರ್ಥಿ ಪವನ್ ಹೆಚ್.ಎಸ್, ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಶ್ರೀರಕ್ಷ ಪಿ, ವಾಣಿಜ್ಯ ವಿಭಾಗದ ಪ್ರತೀಕ್ಷ ಪಿ,10ನೇ ತರಗತಿಯ ಶಝಾ ಫಾತಿಮ, 8ನೇ ತರಗತಿಯ ಎನ್.ಆರ್.ಇಫಾ, 7ನೇ ತರಗತಿಯ ವಂದನ್ ರೈ ಸಿ, 5ನೇ ತರಗತಿಯ ದಿವಿತ್, ಯುಕೆಜಿಯ ಅಝ ಫಾತಿಮ ಅವರಿಗೆ ಶೀಂಟೂರು ಶಿಷ್ಯವೇತನ ನೀಡಲಾಗುವುದು ಎಂದರು.

ಈ ಸಂದರ್ಭ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿರುವ ವಕೀಲ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿಗಳಾದ ಎನ್.ಸುಂದರ ರೈ ನಡುಮನೆ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *