Breaking
19 Sep 2026, Sat

ಮನೆಯಲ್ಲೇ ನೇಣು ಬಿಗಿದು ಯುವ ವೈದ್ಯೆ ಆತ್ಮಹತ್ಯೆ

ಮಂಗಳೂರು: ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಬಪ್ಪಳಿಗೆ ನಿವಾಸಿ ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ ಕೀರ್ತನಾ ಜೋಶಿ (27 ವರ್ಷ ) ಎಂದು ಗುರುತಿಸಲಾಗಿದೆ.

ಪಶುವೈದ್ಯಕೀಯ ಕ್ಷೇತ್ರದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿರುವ ಡಾ. ಕೀರ್ತನಾ ಜೋಶಿ ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸೋಮವಾರ ತಡರಾತ್ರಿ ಕೀರ್ತನಾ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತದೇಹವನ್ನು ಪುತ್ತೂರಿನ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕೀರ್ತನಾ ಜೋಶಿ ತಮ್ಮ ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ. ಮೇಘನಾ ಜೋಶಿ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *