Breaking
3 Jul 2026, Fri

2076ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

ಬಂಟ್ವಾಳ: ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಅಂಗವಾಗಿ ಜರುಗುವ 2076ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಜುಲೈ 3 ಶುಕ್ರವಾರ ಶ್ರೀ ಪದ್ಮಾವತಿ ಸಭಾಭವನ ಬಸ್ತಿಕೋಡಿಯಲ್ಲಿ ನಡೆಯಿತು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ಹರೀಂದ್ರ ಪೈ ಮಾತನಾಡಿ ಶಿಬಿರಾರ್ಥಿಗಳು ಉತ್ತಮ ಗುಣವನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸುವಂತೆ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ ಮಾತನಾಡಿ 63 ಮಂದಿಗೆ ಶಿಬಿರಾರ್ಥಿಗಳಿಗೆ ಹೊಸ ಬದುಕು ಸಿಕ್ಕಿದೆ. ಶಿಬಿರದ ಮೂಲಕ ಜೀವನದಲ್ಲಿ ಒಂದು ತಿರುವು ಸಿಕ್ಕಿದ್ದು ಜೀವನದ ಪರಿವರ್ತನೆಗೆ ಅವಕಾಶವಾಗಲಿದೆ ಎಂದರು. ಜನಜಾಗೃತಿ ವೇದಿಕೆಯ ಬಂಟ್ವಾಳ ತಾಲೂಕು ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ ಸಮಾಜದಲ್ಲಿ ಯಾರೂ ಕೆಟ್ಟವರಿಲ್ಲ. ಕೆಲವೊಂದು ಸಂದರ್ಭಗಳು ವ್ಯಸನಿಗಳನ್ನಾಗಿ ಮಾಡುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಧರ್ಮಾಧಿಕಾರಿಗಳಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.

ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಶಿಬಿರದ ಯಶಸ್ಸಿಗೆ ಸಹಕರಿಸಿದ ಮಹನೀಯರನ್ನು, ನವ ಜೀವನ ಸಮಿತಿಯ ಸದಸ್ಯರುಗಳನ್ನು,ಶೌರ್ಯ ತಂಡದ ಸದಸ್ಯರಗಳನ್ನು, ಯೋಗ ಶಿಕ್ಷಕರನ್ನು, ಶಿಬಿರದ ವೈದ್ಯಾಧಿಕಾರಿ ಯನ್ನು ಅಭಿನಂದಿಸಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್‌ ಪಂಜಿಕಲ್ಲು, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳಾದ ಅಮ್ಮು ರೈ ಅರ್ಕಾಡಿ, ಸದಾನಂದ ನಾವೂರು, ಅರ್ಕಕೀರ್ತಿ ಇಂದ್ರ, ಗಣೇಶ್ ಪ್ರಭು ಪ್ರಕಾಶ್ ಗಟ್ಟಿ, ಯತೀಶ್, ಸದಾನಂದ ಶೀತಲ್, ಪ್ರವೀಣ್ ಕಾಡಬೆಟ್ಟು, ಶೇಖ‌ರ್ ಸಾಮಾನಿ, ಶೌರ್ಯ ತಂಡದ ಕ್ಯಾಪ್ಟನ್ ಪ್ರಕಾಶ್, ಪರಮೇಶ್ವರ, ಶಶಿಧರ ಆಚಾರ್ಯ, ಭಾರತಿ ಚೌಟ, ಡಾ. ರಾಮಕೃಷ್ಣ, ಶಿಬಿರಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಸ್ವಾಗತಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಸಹಕರಿಸಿದರು.ಮಹೇಶ್, ಶ್ರವಣ್ ಅನಿಸಿಕೆ ವ್ಯಕ್ತ ಪಡಿಸಿದರು. ಮದ್ಯವರ್ಜನ ಶಿಬಿರದಲ್ಲಿ 63 ಜನ ಪಾನಮುಕ್ತರಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

Leave a Reply

Your email address will not be published. Required fields are marked *