Breaking
3 Jul 2026, Fri

ವಸತಿ ಇಲ್ಲದವರಿಗೆ ವಸತಿ ಸೌಲಭ್ಯ ಮಂಜೂರಾತಿಗೆ ಪ್ರಭಾಕರ ಪ್ರಭು ಒತ್ತಾಯ

ಬಂಟ್ವಾಳ: ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ವಾಸ್ತವ್ಯದ ಆಶ್ರಯಕ್ಕಾಗಿ ಮನೆಕಟ್ಟಲು ವಸತಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಸರಕಾರ ಇಷ್ವವರೆಗೆ ಮನೆಗಳನ್ನು ಮಂಜೂರು ಮಾಡದಿರುವುದರಿಂದ ವಸತಿ ರಹಿತ ಸಾವಿರಾರು ಕುಟುಂಬಗಳು ವಾಸ್ತವ್ಯದ ಸೂರು ಇಲ್ಲದೇ ಕಂಗಲಾಗಿವೆ.

ಕಳೆದ 3 ವರ್ಷಗಳಿಂದ ಆದೆಷ್ಟೋ ಫಲಾನುಭವಿಗಳು ಗ್ರಾಮ ಪಂಚಾಯತ್ ಗ್ರಾಮ ಸಭೆಗಳಲ್ಲಿ , ವಾರ್ಡ್ ಸಭೆಗಳಲ್ಲಿ ಭಾಗವಹಿಸಿ ವಸತಿ ಯೋಜನೆಗಾಗಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ನೀಡಿ ಮನೆ ಕಟ್ಟಲು ಪೂರ್ವ ತಯಾರಿ ನಡೆಸಿ ಸರಕಾರದ ವಸತಿ ಯೋಜನೆಯ ಸಹಾಯಧನದ ಆಶೆಯಿಂದ ಗ್ರಾಮ ಪಂಚಾಯತ್ ಕಛೇರಿಗಳಿಗೆ ಅಲೆದಾಡುಡುತ್ತಾ ನಿರಾಶೆಗೊಂಡು ಪಂಚಾಯತ್ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹಲವಾರು ಫಲಾನುಭವಿಗಳು ವಸತಿ ಮಂಜೂರಾತಿ ನಿರೀಕ್ಷೆಯಿಂದ ಮನೆ ಅಡಿ ಸ್ಥಳದಲ್ಲಿ ಪಂಚಾಂಗ ನಿರ್ಮಿಸಿಕೊಂಡು ಮನೆ ಮಂಜೂರಾತಿಗಾಗಿ ಕಾಯುತ್ತಿದ್ದು, ಸರಕಾರದ ಯಾವುದೇ ಗ್ಯಾರಂಟಿಗಳು ಸಿಗದಿದ್ದರೂ ಪರವಾಗಿಲ್ಲ ವಾಸ್ತವ್ಯಕ್ಕೆ ಸೂರಿನ ಗ್ಯಾರಂಟಿಗಳೂ ಕೊಡಿ ಎಂದೂ ಒತ್ತಾಯಿಸುತ್ತಿರುವುದು ತಿಳಿದು ಬಂದಿದೆ.

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಬಂದಿರುವ ಮನೆಗಳನ್ನು ಹೊರತು ಪಡಿಸಿ ರಾಜ್ಯ ಸರಕಾರದಿಂದ ಒಂದೇ ಒಂದು ಮನೆ ಮಂಜೂರಾತಿಯಾಗದಿರುವುದು ದುರಂತವೇ ಸರಿ.

ಈ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ವಾರು 10 ಮನೆಗಳನ್ನು ತಕ್ಷಣದಿಂದಲೇ ಮಂಜೂರಾತಿ ಮಾಡಿ ವಾಸ್ತವ್ಯದ ನೆಲೆ ಇಲ್ಲದಂತವರಿಗೆ ಸೂರಿನ ಆಶ್ರಯ ನೀಡುವಂತೆ ಈ ಮೂಲಕ ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾದ ಪ್ರಭಾಕರ ಪ್ರಭುರವರು ಮಾನ್ಯ ಮುಖ್ಯ ಕಾರ್ಯದರ್ಶಿಯವರಿಗೆ ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *