ಬಂಟ್ವಾಳ: ನರಿಕೊಂಬು ಗ್ರಾಮದ ಏರಮಲೆಯ ಭಗವಾನ್ ಶ್ರೀ ಕೋದಂಡರಾಮ ಭಜನಾ ಮಂದಿರ ಟ್ರಸ್ಟ್ (ರಿ) ಇದರ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಏರಮಲೆ ಆಯ್ಕೆಯಾಗಿದ್ದಾರೆ.
ಮಂದಿರದಲ್ಲಿ ನಡೆದ 63ನೇ ವರ್ಷದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಗಣೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಸಪಲ್ಯ ಬೋಳಂತೂರು, ಜೊತೆ ಕಾರ್ಯದರ್ಶಿಯಾಗಿ ರವೀಂದ್ರ ಸಪಲ್ಯ ಬೋಳಂತೂರು, ಕೋಶಾಧಿಕಾರಿಯಾಗಿ ದೀಕ್ಷಿತ್ ಭಂಡಾರಿ, ಭಜನಾ ಸಂಘಟಕರಾಗಿ ಲೋಕೇಶ್ ಸಪಲ್ಯ ಹಾಗೂ ಗೌರವಾಧ್ಯಕ್ಷರಾಗಿ ಚೇತನ್ ಪೂಜಾರಿ ಹೊಸಮನೆ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಮಾಜಿ ಅಧ್ಯಕ್ಷರು, ಹಿರಿಯ ಸಂಚಾಲಕರು ಹಾಗೂ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.








