Breaking
19 Sep 2026, Sat

ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾಣಿಸಿಕೊಂಡ ಎದೆ ನೋವು: ವ್ಯಕ್ತಿ ಸಾವು

ಕಾಸರಗೋಡು: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ನಿಧನರಾದ ಘಟನೆ ಕಾಸರಗೋಡು ಸಮೀಪದ ಬಾಯಾರಿನಲ್ಲಿ ಆ.4 ರಂದು ನಡೆದಿದೆ.

ಮೃತರನ್ನು ಮೀಂಜ ಕೋರಿಕ್ಕಾರು ನಿವಾಸಿ ಮಹಾಬಲ(74) ಎಂದು ಗುರುತಿಸಲಾಗಿದೆ.

ಇವರು ಬಾಯಾರಿನಿಂದ ಆಟೋ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಕೂಡ ಪ್ರಾಣ ಉಳಿಸಲಾಗಲಿಲ್ಲ.

ಮೃತರು ಪತ್ನಿ ವಸಂತಿ, ಮಕ್ಕಳಾದ ಚರಣ್ ಕುಮಾರ್, ಕೀರ್ತನ, ಲತ, ಅನುಷ, ಸೊಸೆ ಪವಿತ್ರ, ಅಳಿಯಂದಿರಾದ ಶ್ರೀಜಿನ್, ವಿಜಯಕುಮಾರ್, ದಿವಾಕರ, ಸಹೋದರ ಸಹೋದರಿಯರಾದ ಕೃಷ್ಣ ಬಂಗೇರ, ಲಿಂಗಪ್ಪ ಬಂಗೇರ, ರಾಮ ಬಂಗೇರ, ಸುಂದರಿ, ಲಕ್ಷ್ಮಿ, ಗೀತಾ ಎಂಬಿವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *