Breaking
19 Sep 2026, Sat

ಪಾಯಿಂಟ್ ನಂಬರ್ ಹನ್ನೊಂದರಲ್ಲೂ ಪತ್ತೆಯಾಗದ ಕಳೆಬರಹ

ಧರ್ಮಸ್ಥಳ: ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣದಲ್ಲಿ ಇಂದು ಕೂಡ ಶೋಧ ಕಾರ್ಯ ಮುಂದುವರೆದಿದ್ದು ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 11:30 ರಿಂದ :45 ರವರೆಗೆ ದೂರುದಾರ ಮುಸುಕು ದಾರಿ ವ್ಯಕ್ತಿ ಹಾಗೂ ಇತರ ಇಲಾಖೆಯ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಬಂದ ಎಸ್ಐಟಿ ಅಧಿಕಾರಿಗಳು ಅಸ್ಥಿ ಪಂಜರಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಆದ್ರೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಇನ್ನು ದೂರುದಾರ ಗುರುತು ಮಾಡಲಾಗಿರುವ 12ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ಮುಂದುವರೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *