Breaking
23 Mar 2026, Mon

ಮಂಗಳೂರಿನಲ್ಲಿ ಎಂದಿನಂತೆ ಸಂಚರಿಸುತ್ತಿರುವ ಸರಕಾರಿ ಬಸ್ ಗಳು

ಮಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆಯ ನೌಕರರು ಇಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದಾರೆ. ಆದ್ರೆ ಇತ್ತ ಮಂಗಳೂರು ವಿಭಾಗದಲ್ಲಿ ದಿನನಿತ್ಯದಂತೆ ಬಸ್ ಗಳು ಸಂಚರಿಸುತ್ತಿವೆ.

ವೇತನ ಪರಿಷ್ಕರಣೆ , ಬಾಕಿ ಎರಿಯರ್ ಪಾವತಿ ಬೇಡಿಕೆ ಮುಂದಿಟ್ಟು ಇಂದು ಕರೆ ನೀಡಲಾಗಿರುವ ಕೆ ಎಸ್ ಆರ್ ಟಿಸಿ ನೌಕರರ ಬಂದ್ ಗೆ ಮಂಗಳೂರು ವಿಭಾಗದಲ್ಲಿ ಸೂಕ್ತ ಸ್ಪಂದನೆ ದೊರೆಯದ ದೃಶ್ಯಗಳು ಕಂಡು ಬಂತು.

ನಗರದ ಲಾಲ್ ಭಾಗ್ ಬಸ್ ನಿಲ್ದಾಣದಲ್ಲಿ ಎಂದಿನಂತೆ ಸ್ ಗಳು ಸಂಚರಿಸುತ್ತಿದ್ದು, ಪ್ರಯಾಣಿಕರು ಸಹ ತಮ್ಮ ಊರಿನ ಬಸ್ ಗಾಗಿ ಕಾದು ಕುಳಿತಿದ್ದಾರೆ.

ಬೇರೆ ಊರಿಗೆ ಹೋಲಿಕೆ ಮಾಡಿದ್ರೆ, ಮಂಗಳೂರಿನಲ್ಲಿ ಇಂದು ಕೂಡ ಸರಕಾರಿ ಬಸ್ ಗಳ ಸಂಚಾರ ಮುಂದುವರಿದಿದೆ.

Leave a Reply

Your email address will not be published. Required fields are marked *