Breaking
4 Jul 2026, Sat

ಧರ್ಮಸ್ಥಳದಲ್ಲಿ 11 ನೇ ಪಾಯಿಂಟ್ ನಲ್ಲಿ ಎಸ್ಐಟಿಯಿಂದ ಅಸ್ಥಿಪಂಜರಕ್ಕಾಗಿ ತಲಾಶ್

ಧರ್ಮಸ್ಥಳ: ಗ್ರಾಮದಲ್ಲಿ ಶವ ಹೂತು ಹಾಕಲಾಗಿರುವ ಪ್ರಕರಣದ ಎಸ್ಎಟಿ ತನಿಖೆ ಇಂದು ಮತ್ತಷ್ಟು ತೀವ್ರಗೊಂಡಿದೆ. ಸೋಮವಾರ ದೂರುದಾರ ಮುಸುಕುದಾರಿ ವ್ಯಕ್ತಿ ಪಾಯಿಂಟ್ ನಂಬರ್ 11ರ ಬದಲಾಗಿ ಬಂಗ್ಲ ಗುಡ್ಡ ಅನ್ನುವ ಗುಡ್ಡ ಪ್ರದೇಶದ ಮೇಲೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿದ್ದ.

ಈ ವೇಳೆ ನಡೆದ ಕಾರ್ಯಾಚರಣೆಯಲಿ ಅಸ್ಥಿ ಪಂಜರದ ಹಲವು ಅವಶೇಷಗಳು ಸಿಕ್ಕಿವೆ ಅಂತ ಹೇಳಲಾಗುತ್ತಿದೆ. ಅವುಗಳನ್ನು ತಜ್ಞರ ತಂಡ ವೈಜ್ಞಾನಿಕವಾಗಿ ಸಂಗ್ರಹ ಮಾಡುವ ಕೆಲಸ ಮಾಡಿದೆ.

ಇವತ್ತು ದೂರುದಾರ ಗುರುತಿಸಿರುವ 11ನೇ ಪಾಯಿಂಟ್ ನಿಂದ ಉಳಿದ ಎಲ್ಲಾ ಪಾಯಿಂಟ್ ಗಳಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಕೆಲವು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *