ಉಜಿರೆ: ಹಿರಿಯ ಯಕ್ಷಗಾನ ಕಲಾವಿದರು, ನಿವೃತ್ತ ದೈಹಿಕ ಶಿಕ್ಷಕ ಧರ್ಮಸ್ಥಳ ಚಿಕ್ಕಮೇಳದ ಮೇಲುಸ್ತುವಾರಿಗಳಾಗಿದ್ದ ಎಸ್. ಬಿ. ನರೇಂದ್ರ ಕುಮಾರ್ (83ವ) ಆ.4ರಂದು ವಿಧಿವಶರಾಗಿದ್ದಾರೆ. ಅಸೌಖ್ಯದ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ನರೇಂದ್ರ ಕುಮಾರ್ ಅವರು ಉತ್ತಮ ಕಬ್ಬಡ್ಡಿ ಆಡಗಾರರೂ ಮತ್ತು ಉತ್ತಮ ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ರಾಷ್ಟ್ರಮಟ್ಟದ ಹಲವಾರು ಮಂದಿ ಕ್ರೀಡಾಪಟುಗಳನ್ನು ರೂಪಿಸಿದ ಕೀರ್ತಿ ಇವರಿಗಿದೆ.

ಮೃತರು ಪತ್ನಿ ಮತ್ತು ಮಕ್ಕಳಾದ ಹೆಸರಾಂತ ಯಕ್ಷಗಾನ ಕಲಾವಿದ, ಪ್ರಾದ್ಯಾಪಕ ಶೃತ ಕೀರ್ತಿರಾಜ, ಉದ್ಯಮಿ ಸಿದ್ಧಾಂತ ಕೀರ್ತಿರಾಜ, ಮತ್ತು ಮಗಳು ಸುಪ್ರಿತಾ ರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಗುರುವಾಯನಕೆರೆಯ ಬಸದಿಯಲ್ಲಿ ನಡೆಯಿತು.



