Breaking
4 Jul 2026, Sat

ಮಂಗಳೂರು: ಸ್ಕೂಟರ್‌ಗೆ ಕಂಟೈನರ್ ಲಾರಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಮಂಗಳೂರು: ಕಂಟೈನರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಜು. 3ರ ಶುಕ್ರವಾರ ಸಂಜೆ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸಮೀಪದ ವಿಆರ್‌ಎಲ್ ಕಚೇರಿ ಎದುರು ನಡೆದಿದೆ.

ಮೃತರನ್ನು ಸದಾನಂದ ಶೆಟ್ಟಿಗಾರ್ (46) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಸದಾನಂದ ಶೆಟ್ಟಿಗಾರ್ ಅವರು ಸ್ಕೂಟರ್‌ನಲ್ಲಿ ಕೊಟ್ಟಾರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ, ಅದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕಂಟೈನರ್ ಲಾರಿಯು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸವಾರ ರಸ್ತೆಗೆ ಬಿದ್ದು, ತಲೆ ಮೇಲೆ ಲಾರಿ ಹರಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾರಿಯನ್ನು ಮಹಮ್ಮದ್ ಅಜರುದ್ದೀನ್ ಎಂಬವರು ಚಲಾಯಿಸುತ್ತಿದ್ದು, ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ವಾಹನ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *