Breaking
12 May 2026, Tue

ಜಾಂಡೀಸ್ ನಿಂದ ಸ್ಯಾಂಡಲ್‌ವುಡ್‌ ನ ಯುವ ನಟ ಸಂತೋಷ್ ಬಾಲರಾಜ್ ನಿಧನ

ಬೆಂಗಳೂರು: ಜಾಂಡೀಸ್ ಕಾಯಿಲೆಯಿಂದ ಕನ್ನಡದ ಯುವ ನಟ ಸಂತೋಷ್ ಬಾಲರಾಜ್(34) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಸಂತೋಷ್ ಬಾಲರಾಜ್ ಅವರು ಕನ್ನಡದ ‘ಕರಿಯಾ-2’, ‘ಕೆಂಪ’, ‘ಗಣಪ’, ‘ಬರ್ಕ್ಲಿ’, ‘ಸತ್ಯ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನಪ್ರಿಯರಾಗಿದ್ದರು.

Leave a Reply

Your email address will not be published. Required fields are marked *