ಹಾಸನ: ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮದ ಯುವಕ ಸೋಮಶೇಖರ್ (30) ಮೃತಪಟ್ಟ ಯುವಕನಾಗಿದ್ದಾನೆ.

ಜಿಮ್ ಸೋಮ ಎಂದೇ ಖ್ಯಾತಿಯಾಗಿದ್ದ ಸೋಮಶೇಖರ್ ಅವರು ಆರೂವರೆ ಅಡಿ ಎತ್ತರ, 110 ಕೆಜಿ ಹೊಂದಿದ್ದರು. ಬಾಡಿ ಬಿಲ್ಡಿಂಗ್ನಲ್ಲಿ ಹಲವಾರು ಟೈಟಲ್ ಜಯಿಸಿದ್ದ ಅವರು ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು.

ಕಳೆದ ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.



